ಕುಂದಾಪುರ: ಅಸೋಡು ಹಾಗೂ ಚಾರುಕೊಟ್ಟಿಗೆ ನಡುವಿನ ಡಾಂಬರು ಕಾರ್ಖಾನೆ ಸ್ಥಳೀಯ ಪರಿಸರವನ್ನು ಹಾಳು ಮಾಡುತ್ತಿದ್ದು, ಇಲ್ಲಿನ ಸ್ಥಳೀಯರಿಗೆ ಡಾಂಬರು ವಾಸನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇಲ್ಲಿನ ಕಾರ್ಖಾನೆಗೆ ಪೋಲ್ಯೂಷನ್ ಸೇರ್ಟಿಫಿಕೇಟ್ ನೀಡುವಾಗ ಅಧಿಕಾರಿಗಳು ಲಂಚ ಪಡೆದಿದ್ದು, ಈ ಕಾರ್ಖಾನೆಗೆ ಪರವಾನಿಗೆ ಪಡೆಯಲು ಸ್ಥಳೀಯ ಪಂಚಾಯತ್ ಸದ್ಯಸರು ಹಾಗೂ ಪಿಡಿಒಗಳ ಕೈವಾಡವಿದೆ ಎಂದು ಇಲ್ಲಿನ ಸ್ಥಳೀಯರಾದ ಪ್ರಕಾಶ್ ಶೆಟ್ಟಿ ಆರೋಪಿಸಿದ್ದಾರೆ.
Kshetra Samachara
01/04/2022 05:24 pm