ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಾಹಿತಿ ನೀಡದಿದ್ದರೇ ಪ್ರತ್ಯಕ್ಷದರ್ಶಿಗಳೆ ಅಪರಾಧಿಗಳು; ಡಿಜಿ

ಯಾವುದೇ ಪ್ರಕರಣಗಳಿರಲಿ ಅದನ್ನು ನೋಡಿರುವ, ಮಾಹಿತಿಯಿದ್ದ ಪ್ರತ್ಯಕ್ಷದರ್ಶಿಗಳು ಪೊಲೀಸ್‌ಗೆ ಮಾಹಿತಿ ನೀಡಿದರೆ ಪ್ರಕರಣ ಬೇಧಿಸಲು ಸುಲಭವಾಗುತ್ತದೆ. ಇಲ್ಲವಾದಲ್ಲಿ

ಅವರೂ ಪ್ರಕರಣದಲ್ಲಿ ಭಾಗೀದಾರರೆಂದು ತಿಳಿಯಬೇಕಾಗುತ್ತದೆ ಎಂದು ಡಿಜಿ ಪ್ರವೀಣ್ ಸೂದ್ ಹೇಳಿದರು.

ಮಂಗಳೂರಿಗೆ ಆಗಮಿಸಿರುವ ಅವರು ಮಾತನಾಡಿ, ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರಷ್ಟೇ ಅಲ್ಲ, ನಾಗರಿಕರ ಜವಾಬ್ದಾರಿಯೂ ಇದೆ. ಅದ್ರಿಂದ ಎಲ್ಲಾ ಸಮುದಾಯಗಳ, ಸಂಘಟನೆಗಳ ಮುಖಂಡರು ಪೊಲೀಸರೊಂದಿಗೆ ಕೈಜೋಡಿಸಿದ್ದಲ್ಲಿ ಪ್ರಕರಣಗಳನ್ನು ಸುಲಭವಾಗಿ ಬೇಧಿಸಲುಸಾಧ್ಯ ಎಂದರು.

ದ.ಕ.ಜಿಲ್ಲೆಯಲ್ಲಿ ನಡೆದ ಮೂರು ಕೊಲೆ ಪ್ರಕರಣಗಳಲ್ಲಿ ಮಸೂದ್ ಹಂತಕರ ಪೈಕಿ ಎಂಟು ಮಂದಿ ಬಂಧಿಸಲಾಗಿದೆ. ಇನ್ನು ಪ್ರವೀಣ್ ಹಂತಕರಿಬ್ಬರ ಅರೆಸ್ಟ್ ಆಗಿದ್ದು, ತನಿಖೆ ಮುಂದಿವರಿದಿದೆ. ಮುಂದಿನ ದಿನಗಳಲ್ಲಿ ಆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತೇವೆ. ಫಾಝಿಲ್ ಹತ್ಯೆ ಪ್ರಕರಣದಲ್ಲೂ ಈಗಾಗಲೇ ಹಂತಕರು ಬಳಸಿರುವ ಕಾರು ಪತ್ತೆಯಾಗಿದ್ದು, ಕಾರು ಮಾಲಕನನ್ನೂ ವಶಪಡಿಸಿಕೊಳ್ಳಲಾಗಿದೆ. ಸದ್ಯದಲ್ಲೇ ಮೂರೂ ಪ್ರಕರಣವನ್ನು ಬೇಧಿಸಲಾಗುತ್ತದೆ ಎಂದು ಹೇಳಿದರು.

ಐಜಿ, ದ.ಕ. ಜಿಲ್ಲಾ ಎಸ್ಪಿ, ಮಂಗಳೂರು ಪೊಲೀಸ್ ಕಮಿಷನರ್, ಡಿಸಿಯೊಂದಿಗೆ ಚರ್ಚಿಸಿ ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಗಡಿ ಪ್ರದೇಶದಲ್ಲಿ ತಪಾಸಣೆಯನ್ನು ಬಿಗಿಗೊಳಿಸಿದ್ದು, ಅದರೊಂದಿಗೆ ಪೊಲೀಸ್ ಬಲ ಹೆಚ್ಚು ಮಾಡಲು ಸಿಎಂ ಜೊತೆ ಮಾತನಾಡಿದ್ದೇನೆ. ಪ್ರಕರಣಗಳ ಹಂತಕರನ್ನು ಬಂಧಿಸಲಾಗುತ್ತದೆ. ಇದರಲ್ಲಿ ಯಾವುದೇ ಸಂಘಟನೆ, ವ್ಯಕ್ತಿ, ಸಿದ್ಧಾಂತ ಭಾಗಿ ಇದ್ದರೂ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರವೀಣ್ ಸೂದ್ ಹೇಳಿದರು.''

Edited By :
PublicNext

PublicNext

01/08/2022 01:43 pm

Cinque Terre

50.89 K

Cinque Terre

4

ಸಂಬಂಧಿತ ಸುದ್ದಿ