ಸುರತ್ಕಲ್ ನಲ್ಲಿ ಕೊಲೆಯಾದ ಮಹಮ್ಮದ್ ಫಾಝಿಲ್ ನನ್ನು ಕೊಲೆಗೈಯಲು ಆರೋಪಿಗಳು ಬಳಸಿದ್ದ ಕಾರು ಪಡುಬಿದ್ರೆ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಪತ್ತೆಯಾಗಿದ್ದು ಬೆರಳಚ್ಚು ಮತ್ತು ಎಫ್ ಎಸ್ ಎಲ್ ತಜ್ಞರು ಹೆಚ್ಚಿನ ತಪಾಸಣೆ ನಡೆಸಿದ್ದಾರೆ.
ಹತ್ಯೆಗೆ ಇದೇ ಬಿಳಿ ಬಣ್ಣದ ಇಯಾನ್ ಕಾರನ್ನು ಬಳಸಿರುವುದು ತನಿಖೆಯಿಂದ ದೃಢಗೊಂಡಿದೆ.ಕಾರ್ಕಳ ತಾಲೂಕು ವ್ಯಾಪ್ತಿಯ ಇನ್ನಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಈ ಬಳಿ ಬಣ್ಣದ ಇಯಾನ್ ಕಾರು ನಿನ್ನೆ ಪತ್ತೆಯಾಗಿತ್ತು.ಕೊಲೆಗಾರರು ಸುರತ್ಕಲ್ ನಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಇಲ್ಲಿಗೆ ರಾತ್ರೋರಾತ್ರಿ ಆಗಮಿಸಿ ಕಾರನ್ನಿಟ್ಟುಪರಾರಿಯಾಗಿದ್ದಾರೆ.ಕಾರು ಮಾಲೀಕನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
ಹೆಚ್ಚು ಬಾಡಿಗೆಯ ಆಮಿಷ ತೋರಿಸಿ ಆರೋಪಿಗಳು ಈ ಕಾರನ್ನು ಬಾಡಿಗೆಗೆ ಪಡೆದುಕೊಂಡು ಬಂದಿದ್ದರು.ಈ ಪೈಕಿ ಓರ್ವ ಆರೋಪಿ ಕಾರ್ ಮಾಲೀಕನ ಜೊತೆ ಈ ಹಿಂದೆಯೂ ಸಂಪರ್ಕದಲ್ಲಿದ್ದ ಎಂಬ ಅಂಶ ಪೊಲೀಸರ ತನಿಖೆಯಿಂದ ದೃಢಗೊಂಡಿದೆ.
PublicNext
01/08/2022 01:18 pm