ಹಿರಿಯಡ್ಕ: ಪರೀಕ್ಷೆಯ ಭಯದಿಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಹಿರಿಯಡ್ಕ ವ್ಯಾಪ್ತಿಯಲ್ಲಿ ನಡೆದಿದೆ.
ಹತ್ತನೆ ತರಗತಿ ವಿದ್ಯಾರ್ಥಿ ಜಿಸಾನ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಬೊಮ್ಮರಬೆಟ್ಟು ಗ್ರಾಮದ ಕುಕ್ಕುದಕಟ್ಟೆ ನಿವಾಸಿಯಾಗಿರುವ ಜಿಸಾನ್, ಮಣಿಪಾಲದ ಎಂಜೆಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ಫೆ.21ರಂದು ನಡೆದ ಪರೀಕ್ಷೆಗೆ ಹೋಗದೆ ಇದ್ದ ಜಿಸಾನ್‌ಗೆ ತಾಯಿ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಪರೀಕ್ಷೆಯ ಭಯ ಅಥವಾ ವೈಯಕ್ತಿಕ ಕಾರಣದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
23/02/2022 12:11 pm