ಮಂಗಳೂರು : ಚಂದನವನದ ಸ್ಟಾರ್ ನಟರು ಡ್ರಗ್ಸ್ ಕೇಸ್ ಸಿಲುಕಿ ಬಂಧನಕ್ಕೆ ಒಳಪಟ್ಟಿರುವಾಗಲೇ ಇಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಮತ್ತೊಬ್ಬ ಡ್ಯಾನ್ಸರ್ ಬಂಧನವಾಗಿದೆ.
ಬಂಧಿತವಾಗಿರುವವ ಆರೋಪಿ ಮಂಗಳೂರಿನ ಡ್ಯಾನ್ಸರ್ ಕಿಶೋರ್ ಶೆಟ್ಟಿ ಎಂಬುವವನಾಗಿದ್ದು ಖ್ಯಾತ ಡ್ಯಾನ್ಸರ್ ಆಗಿರುವ ಕಿಶೋರ್ ಶೆಟ್ಟಿ ಡ್ರಗ್ಸ್ ಸಾಗಾಟದ ವೇಳೆ ಮಂಗಳೂರು ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾನೆ.
ಈತ ಹಿಂದಿಯ ABCD ಸಿನಿಮಾದಲ್ಲಿ ನಟಿಸಿದ್ದ ಜೊತೆಗೆ
ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ನಲ್ಲೂ ಸ್ಪರ್ಧಿಯಾಗಿದ್ದನಂತೆ
ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Kshetra Samachara
19/09/2020 09:09 am