ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಲಿಗೂ ಪಸರಿಸಿದ ಡ್ರಗ್ಸ್ ಘಾಟು : 7 ದಿನ ಪೊಲೀಸ್ ವಶದಲ್ಲಿ ಡ್ಯಾನ್ಸರ್, ನಟ ಕಿಶೋರ್ ಶೆಟ್ಟಿ

ಮಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಘಾಟು ಎಷ್ಟರ ಮಟ್ಟಿಗೆ ಹರಡಿದೆ ಎಂದ್ರೆ ಇಲ್ಲಿ ದಿನಕ್ಕೊಂದು ಹೊಸ ಮುಖ ಪರಿಚಯವಾಗುತ್ತಿದೆ.

ಸಧ್ಯ ಮಾದಕವಸ್ತು ಕಳ್ಳಸಾಗಣೆ ಮತ್ತು ಸೇವನೆ ಆರೋಪದಡಿ ಶನಿವಾರ ಬಂಧಿಸಲ್ಪಟ್ಟಿದ್ದ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ (30) ಮತ್ತು ಅಕಿಲ್ ನೌಶೀಲ್ (28) ಅವರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಭಾನುವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ನಂತರ ಪೊಲೀಸರು ವಶಕ್ಕೆ ತೆಗೆದುಕೊಂಡರು.

ಪ್ರಾಥಮಿಕ ವಿಚಾರಣೆಯ ಸಮಯದಲ್ಲಿ, ಕಿಶೋರ್ ಸ್ವತಃ ಮಾದಕ ವ್ಯಸನಿಯಾಗಿದ್ದರೂ, ಅವರು ಇತ್ತೀಚೆಗೆ ಮಾದಕವಸ್ತು ವ್ಯವಹಾರವನ್ನು ಪ್ರಾರಂಭಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.

ಅವರು ಡ್ಯಾನ್ಸರ್ ಆಗಿ ಮಾತ್ರವಲ್ಲ ಬಾಲಿವಿಡ್ ಚಿತ್ರಗಳಲ್ಲಿ ನಟರಾಗಿ ಸಹ ಗುರುತಿಸಿಕೊಂಡಿದ್ದಾರೆ.

ಕೆಲವು ತಿಂಗಳ ಹಿಂದೆ ನಗರಕ್ಕೆ ಮರಳಿದ್ದ ಕಿಶೋರ್ ತಾನು ಮುಂಬೈಯಲ್ಲಿ ಬೀಡುಬಿಟ್ಟಿದ್ದ ತನ್ನ ಸ್ನೇಹಿತರ ಗುಂಪಿನ ಮೂಲಕ ಮುಂಬೈಯಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದದ್ದಾಗಿ ಒಪ್ಪಿಕೊಂಡಿದ್ದಾನೆ.

Edited By : Nirmala Aralikatti
Kshetra Samachara

Kshetra Samachara

21/09/2020 01:33 pm

Cinque Terre

35.07 K

Cinque Terre

1

ಸಂಬಂಧಿತ ಸುದ್ದಿ