ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸೆ.22ರಂದು ನೆಟ್ ಫ್ಲಿಕ್ಸ್ ಮಂಗಳೂರು ಪೊಲೀಸ್ ಆಯುಕ್ತರ ಪಾತ್ರವಿರುವ 'ಕ್ರೈಂ ಸ್ಟೋರಿಸ್' ಬಿಡುಗಡೆ

ಮಂಗಳೂರು: ಬೆಂಗಳೂರಿನ ನಾಲ್ಕು ಪ್ರಮುಖ ಅಪರಾಧ ಪ್ರಕರಣಗಳ ತನಿಖೆ ಹಾಗೂ ಅಪರಾಧಿಗಳ ಪತ್ತೆ ಕಾರ್ಯಾಚರಣೆಯ 'ಕ್ರೈಂ ಸ್ಟೋರೀಸ್ ಇಂಡಿಯಾ ಡಿಟೆಕ್ಟೀವ್ಸ್' ಡಾಕ್ಯುಮೆಂಟರಿ ಹಾಗೂ ವೆಬ್‌ ಸೀರೀಸ್ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಸೆ. 22ರಂದು ಬಿಡುಗೆಯಾಗಲಿದೆ. ಇದು ಸೀರೀಸ್ ರೀತಿಯಲ್ಲಿ ಪ್ರಸಾರವಾಗಲಿದೆ.

2019-20ರಲ್ಲಿ ಬೆಂಗಳೂರಿನಲ್ಲಿ ಭಾಸ್ಕರ್ ರಾವ್ ಪೊಲೀಸ್ ಕಮಿಷನರ್ ಆಗಿದ್ದ ಸಂದರ್ಭ ಲಂಡನ್ ಮೂಲದ ನೆಟ್‌ಫ್ಲಿಕ್ಸ್ ತಂಡವು ಸಂಪರ್ಕಿಸಿ ಅಪರಾಧ ಕೃತ್ಯಗಳ ನೈಜ ಘಟನೆಗಳ ಸಾಕ್ಷ್ಯಚಿತ್ರಗಳನ್ನು ಚಿತ್ರೀಕರಿಸಲು ಅನುಮತಿ ಕೇಳಿತ್ತು. ಅದರಂತೆ ಬೆಂಗಳೂರು ಉತ್ತರ ವಿಭಾಗದ ನಂದಿನಿ ಲೇಔಟ್, ಸುಬ್ರಹ್ಮಣ್ಯ ನಗರ ಹಾಗೂ ಸಂಜಯ್ ನಗರದ ಮೂರು ಪ್ರಕರಣ ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳ ತನಿಖೆ ಹಾಗೂ ಅಪರಾಧಿಗಳ ಪತ್ತೆ ಕಾರ್ಯವು ಈ ಸೀರೀಸ್‌ನಲ್ಲಿದೆ. ಆ ಸಂದರ್ಭ ಬೆಂಗಳೂರು ವಿಭಾಗದಲ್ಲಿ ಡಿಸಿಪಿಯಾಗಿ, ಈಗ ಮಂಗಳೂರು ಪೊಲೀಸ್ ಕಮಿಷನರ್ ಆಗಿರುವ ಶಶಿಕುಮಾರ್ ಎನ್., ವೈಟ್ ಫೀಲ್ಡ್ ಡಿಸಿಪಿ ಅನುಚೇತ್, ನಂದಿನಿ ಲೇಔಟ್ ಇನ್ಸ್‌ಪೆಕ್ಟರ್ ಲೋಹಿತ್, ಸುಬ್ರಹ್ಮಣ್ಯ ನಗರದ ಸಬ್ ಇನ್ಸ್‌ಪೆಕ್ಟರ್ ಲತಾ, ಸಂಜಯ್ ನಗರ ಸಬ್ ಇನ್ಸ್‌ಪೆಕ್ಟರ್ ರೂಪಾ ಸೇರಿದಂತೆ ಪೊಲೀಸ್ ತಂಡ ಜತೆಯಾಗಿ ನಿರ್ವಹಿಸಿದ ಕರ್ತವ್ಯವನ್ನು ಸೀರಿಸ್ ರೂಪದಲ್ಲಿ ಚಿತ್ರೀಕರಿಸಲಾಗಿತ್ತು.

ನೆಟ್‌ಫ್ಲಿಕ್ಸ್‌ನ ಲಂಡನ್ ಮೂಲದ ವಿದೇಶಿಯರು ನಿರ್ದೇಶನ ನಿರ್ಮಾಣದ ಜವಾಬ್ದಾರಿಯನ್ನು ನಿರ್ವಹಿಸಿದೆ. ಉಳಿದಂತೆ ತಾಂತ್ರಿಕವಾಗಿ ಸ್ಥಳೀಯ ನುರಿತ ತಂಡ ಇವರಿಗೆ ಸಹಕರಿಸಿದೆ. ರಿಯಲ್ ಟೈಮ್ ಬೇಸಿಸ್‌ನಲ್ಲಿ ಶೂಟಿಂಗ್ ಮಾಡಲಾಗಿದ್ದು, ಯಾವುದೇ ಫಿಕ್ಷನ್ ಅಥವಾ ಸೀನ್ ಕ್ರಿಯೇಟ್ ಮಾಡಲಾಗಿಲ್ಲ. ಒಂದು ಅಪರಾಧ ಕೃತ್ಯ ನಡೆದಾಗ ಪೊಲೀಸರ ತಂಡ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬ ಘಟನಾವಳಿಯನ್ನು ಒಳಗೊಂಡು ಚಿತ್ರೀಕರಣ ನಡೆಸಲಾಗಿದೆ.

Edited By :
Kshetra Samachara

Kshetra Samachara

14/09/2021 10:39 pm

Cinque Terre

33.66 K

Cinque Terre

1

ಸಂಬಂಧಿತ ಸುದ್ದಿ