ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹಿರಿಯ ನಟಿ ಪದ್ಮಜಾ ರಾವ್‌ಗೆ ಜಾಮೀನು ರಹಿತ ಬಂಧನ ವಾರಂಟ್

ಮಂಗಳೂರು: ಮಂಗಳೂರಿನ ವೀರೂ ಟಾಕೀಸ್ ಪ್ರೊಡಕ್ಷನ್ ಸಂಸ್ಥೆಗೆ ನೀಡಿದ 40 ಲಕ್ಷ ರೂ.ಗಳ ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿ ಪದ್ಮಜಾ ರಾವ್ ವಿರುದ್ಧ ಮಂಗಳೂರಿನ ಜೆ.ಎಂ.ಎಫ್‌.ಸಿ. ಐದನೇ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್‌ ಹೊರಡಿಸಿದೆ.

ಈ ವಾರಂಟ್‌ನ್ನು ಈಗಾಗಲೇ ತಲಘಟ್ಟಪುರ ಪೊಲೀಸ್‌ ಠಾಣೆಗೆ ರವಾನಿಸಲಾಗಿದೆ. ಪದ್ಮಜಾ ರಾವ್ ರನ್ನು ಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ನಟ, ನಿರ್ದೇಶಕ ವೀರೇಂದ್ರ ಶೆಟ್ಟಿ ಒಡೆತನದ ವೀರೂ ಟಾಕೀಸ್ ಪ್ರೊಡಕ್ಷನ್ ಹೌಸ್‌ನಿಂದ ಹಿರಿಯ ನಟಿ ಪದ್ಮಜಾ ರಾವ್ ಹಂತ ಹಂತವಾಗಿ ಸುಮಾರು 41 ಲಕ್ಷ ರೂ. ವನ್ನು ಬ್ಯಾಂಕ್‌ ಖಾತೆಯ ಮೂಲಕ ಸಾಲ ಪಡೆದುಕೊಂಡಿದ್ದು, ಈ ಸಾಲದ ಭದ್ರತೆಗಾಗಿ 40 ಲಕ್ಷ ರೂ.ನ ಚೆಕ್‌ ನೀಡಿದ್ದರು.

ಪದ್ಮಜಾ ರಾವ್ ಸಾಲ ವಾಪಸ್ ಮಾಡದೆ ವಂಚಿಸಿದಾಗ ವೀರೂ ಟಾಕೀಸ್‌ ಸಂಸ್ಥೆಯಿಂದ ಸದ್ರಿ ಚೆಕ್‌ ಅನ್ನು ಪದ್ಮಜಾ ರಾವ್ ಖಾತೆಗೆ ಹಾಕಲಾಗಿತ್ತು. ಆದರೆ, ಖಾತೆಯಲ್ಲಿ ಹಣವಿಲ್ಲದೆ ಚೆಕ್‌ ಬೌನ್ಸ್ ಆಗಿತ್ತು. ಈ ಬಗ್ಗೆ ಮಂಗಳೂರಿನ ಜೆ.ಎಂ.ಎಫ್‌.ಸಿ. ಐದನೇ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು.

Edited By : Vijay Kumar
Kshetra Samachara

Kshetra Samachara

11/02/2021 03:37 pm

Cinque Terre

34.31 K

Cinque Terre

2

ಸಂಬಂಧಿತ ಸುದ್ದಿ