ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ ನ್ಯೂಸ್ : ಉಡುಪಿ: ಹಾಡಹಗಲೇ ಹಿರಿಯಡ್ಕ ಪೇಟೆಯಲ್ಲಿ ಮಾರಕಾಯುಧಗಳಿಂದ ಯುವಕನ ಕೊಚ್ಚಿ ಕೊಲೆ; ಬೆಚ್ಚಿ ಬಿದ್ದ ಜನತೆ

ಹಿರಿಯಡ್ಕ: ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ರೌಡಿ ಶೀಟರ್ ಓರ್ವನನ್ನು ಹಾಡಹಗಲೇ ದುಷ್ಕರ್ಮಿಗಳ ತಂಡವೊಂದು ಅಟ್ಟಾಡಿಸಿ ಮಾರಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಇಂದು ನಡೆದಿದೆ.

ಕೊಲೆಯಾದ ವ್ಯಕ್ತಿ ಇನ್ನಾ ಗ್ರಾಮದ ಕಿಶನ್ ಹೆಗ್ಡೆ ಎಂದು ಗುರುತಿಸಲಾಗಿದೆ.

ಕಿಶನ್ ಹೆಗ್ಡೆ ಹಾಗೂ ಮತ್ತೋರ್ವ ಕಾರಿನಲ್ಲಿ ಹಿರಿಯಡ್ಕ ಬಳಿ ಬರುತ್ತಿದ್ದಂತೆ ಎರಡು ಕಾರುಗಳಲ್ಲಿ ಬಂದ ದುಷ್ಕರ್ಮಿಗಳು ಕಿಶನ್ ಹೆಗ್ಡೆಯನ್ನು ಮಾರಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಸ್ಥಳಕ್ಕೆ ಹಿರಿಯಡ್ಕ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಹಾಡಹಗಲೇ ಕೊಲೆ ನಡೆದ ಸ್ಥಳದಲ್ಲಿ ಹಿರಿಯಡ್ಕ ಆಸುಪಾಸಿನ ಜನ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದು,ಈ ಘಟನೆಗೆ ಬೆಚ್ಚಿ ಬಿದ್ದಿದ್ದಾರೆ. ಹೆಚ್ಚಿನ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.

Edited By : Nagesh Gaonkar
Kshetra Samachara

Kshetra Samachara

24/09/2020 03:55 pm

Cinque Terre

74.02 K

Cinque Terre

0

ಸಂಬಂಧಿತ ಸುದ್ದಿ