ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಗ್ರಾಮ ಪಂಚಾಯತ್ ಚುನಾವಣೆ ವೇಳೆ ತೆಂಗಿನಕಾಯಿ ಮೇಲೆ ಲಿಪಿಯಲ್ಲಿ ಬರೆದ ಬರಹ ಪತ್ತೆ: ವಾಮಾಚಾರ ಶಂಕೆ

ಬಂಟ್ವಾಳ: ಕೊಳ್ನಾಡು ಗ್ರಾಮದ ಕುಳಾಲು ಎಂಬಲ್ಲಿ ತೆಂಗಿನಕಾಯಿ ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದರ ಹಿಂಭಾಗದಲ್ಲಿ ಯಾವುದೊ ಲಿಪಿಯಲ್ಲಿ ಬರೆಯಲಾಗಿದೆ. ವಾಮಾಚಾರ ನಡೆಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

ಅಭ್ಯರ್ಥಿಯೊಬ್ಬರ ಮನೆ ಸಂಪರ್ಕ ರಸ್ತೆಯಲ್ಲಿ ಮುಸ್ಸಂಜೆ ಹೊತ್ತಿಗೆ ಯಾವುದೋ ಲಿಪಿಯಲ್ಲಿ ಬರೆದು ತೆಂಗಿನಕಾಯಿ ಹೊಡೆದಿದ್ದು ಕಂಡುಬಂದಿದೆ. ಬಂಡಮುಗೇರು ಕ್ರಾಸ್ ನಲ್ಲಿಯೂ ಒಂದು ಯಾವುದೇ ಲಿಪಿ ಇರದ ಮಾಮೂಲಿ ತೆಂಗಿನಕಾಯಿ ಹಾಗೂ ಲಿಂಬೆ ಹುಳಿ ಒಡೆದಿರುವುದು ಕಂಡು ಬಂದಿದೆ. ಇದನ್ನು ಮನಗಂಡ ಸ್ಥಳೀಯ ಪ್ರಮುಖರು, ಕಾರ್ಯಕರ್ತರು ಕುಳಾಲಿನ ಕಾರಣಿಕ ಶಕ್ತಿ ಶ್ರೀ ವಾರಹಿ (ಮಲರಾಯಿ) ದೈವದ ಮೊರೆ ಹೋಗಿ ದೈವದ ಚಾಕ್ರಿ ಮಾಡುತ್ತಿರುವ ಹಿರಿಯರು ಆದ ದೇವು ಸಪಲ್ಯ ಅವರ ಉಪಸ್ಥಿತಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ನಂತರ ಚುನಾವಣೆ ದಿವಸ ಸಂಜೆ ಕಾರ್ಯಕರ್ತರೊಬ್ಬರ ಮನೆಯ ಹತ್ತಿರ ಪುನಃ ಒಂದು ತೆಂಗಿನಕಾಯಿ ಒಡೆದಿದ್ದು, ಪತ್ತೆಯಾಗಿದೆ. ಒಡೆಯುವ ಶಬ್ಧ ಕೇಳಿದ ಕಾರ್ಯಕರ್ತ ಬಂದು ನೋಡುವಾಗ ಅಭ್ಯರ್ಥಿಯೊಬ್ಬರ ಮನೆ ಸಂಪರ್ಕ ರಸ್ತೆಯಲ್ಲಿ ಒಡೆದಿರುವ ಯಾವುದೋ ಲಿಪಿಯಲ್ಲಿ ಬರೆದ ತೆಂಗಿನಕಾಯಿ ಪತ್ತೆಯಾಗಿದೆ. ಇದೀಗ ಈ ಭಾಗದಲ್ಲಿ ಆತಂಕ ವ್ಯಕ್ತವಾಗಿದೆ.

Edited By : Nagesh Gaonkar
Kshetra Samachara

Kshetra Samachara

23/12/2020 07:57 pm

Cinque Terre

34.32 K

Cinque Terre

4

ಸಂಬಂಧಿತ ಸುದ್ದಿ