ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಪ್ಪಲಿ ಅಂಗಡಿಯಲ್ಲಿ ಮತಾಂತರಿತ ಮಹಿಳೆಯ ಧರಣಿ: ಯಾಕೆ? ಏನಿದು?

ಸುಳ್ಯ: ಅವನ ಮಾತು ಕೇಳಿ ನಾನು ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದೇನೆ. ನಂತರ ಮದುವೆ ಮಾಡಿಕೊಂಡ ಆತ ಈಗ ನಡುವೆ ಏಕಾಏಕಿ ನನ್ನನ್ನು ಕೈ ಬಿಟ್ಟಿದ್ದಾನೆ. ಹೀಗಾಗಿ ನನಗೆ ನ್ಯಾಯ ಕೊಡಿಸಿ ಅಂತ ಮೋಸಕ್ಕೊಳಗಾದ ಮಹಿಳೆಯೊಬ್ಬರು ತನ್ನ ಪತಿಯ ಮಾಲೀಕತ್ವದ ಚಪ್ಪಲಿ ಅಂಗಡಿಯಲ್ಲಿ ಅಹೋರಾತ್ರಿ ಧರಣಿ ಕೂತಿದ್ದಾರೆ.

ಸುಳ್ಯದಲ್ಲಿ ಕಳೆದ ಹಲವು ತಿಂಗಳುಗಳಿಂದ ಸಂಚಲನ ಮೂಡಿಸಿರುವ ಆಸಿಯಾ-ಇಬ್ರಾಹಿಂ ಖಲೀಲ್ ಕಟ್ಟೆಕ್ಕಾರ್ ಪ್ರಕರಣ ಇದೀಗ ಹೊಸ ತಿರುವು ಪಡೆದಿದೆ. ರಾಜೀ ಸಂಧಾನದ ಸಭೆಯಲ್ಲಿ ಸುಖಾಂತ್ಯಗೊಳ್ಳುವುದೆಂಬ ನಿರೀಕ್ಷೆ ಸುಳ್ಳಾಗಿದೆ. ಅಂತಿಮ ನಿರ್ಣಯ ಸಿಗದ ಕಾರಣ ಆಸಿಯಾ ಗಾಂಧಿನಗರದಲ್ಲಿರುವ ಕಟ್ಟೆಕಾರ್ ಫೂಟ್‌ವೇರ್ ಮಳಿಗೆಯಲ್ಲಿ ಇಡೀ ರಾತ್ರಿ ಧರಣಿ ಕುಳಿತಿದ್ದಾರೆ.

ಸುಳ್ಯದ ಇಬ್ರಾಹಿಂ ಖಲೀಲ್‌ಗೆ ಕೇರಳದ ಹಿಂದೂ ಧರ್ಮಕ್ಕೆ ಸೇರಿದ ಶಾಂತಿ ಜೂಬಿ ಎಂಬ ಯುವತಿಯ ಪರಿಚಯವಾಗಿ ಬಳಿಕ ಮತಾಂತರವಾಗಿ ಅವರಿಬ್ಬರು ಮದುವೆಯಾಗಿದ್ದಾರೆಂದು ಆಸಿಯಾ ಹೇಳಿದ್ದಾರೆ. ಈಗ ಖಲೀಲ್ ಆಕೆಯನ್ನು ದೂರ ಮಾಡಿದ್ದಾನೆಂದು ಆಪಾದಿಸಿದ್ದಾರೆ. ಖಲೀಲ್‌ನನ್ನು ಮದುವೆಯಾದ ಬಳಿಕ ತನಗಿದ್ದ ಶಾಂತಿ ಎಂಬ ಹೆಸರನ್ನು ಬದಲಿಸಿ ಆಸಿಯಾ ಎಂದು ಇಟ್ಟುಕೊಂಡಿರುವುದಾಗಿಯು ಯುವತಿ ಹೇಳಿದ್ದಾಳೆ.

ಸದ್ಯ ಇಬ್ರಾಹಿಂ ತನೆಗೆ ಮೋಸ ಮಾಡಿದ್ದಾನೆಂದು ಆರೋಪಿಸಿರುವ ನೊಂದ ಆಸಿಯಾ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯಕ್ಕೆ ಬಂದು ಪ್ರತಿಭಟನೆ ನಡೆಸಿದ್ದರು. ಈ ಘಟನೆ ಸುಮಾರು ಒಂದು ತಿಂಗಳು ಹಗ್ಗಜಗ್ಗಾಟದಲ್ಲಿ ಮುಂದುವರಿದು ಬಳಿಕ ನ್ಯಾಯಾಲಯದ ಮೆಟ್ಟಿಲೇರಿ ತಣ್ಣಗಾಗಿತ್ತು.

ಆಸಿಯಾ – ಖಲೀಲ್ ಕಟ್ಟೆಕಾರ್ ಪ್ರಕರಣವನ್ನು ಶಮನಗೊಳಿಸಲು ಜಿಲ್ಲಾ ಮುಸ್ಲಿಂ ಒಕ್ಕೂಟ , ಮುಸ್ಲಿಂ ಸಂಘಟನೆಗಳು ಮತ್ತು ಗಾಂಧಿನಗರ ಜುಮಾ ಮಸ್ಜಿದ್ ಆಡಳಿತ ಸಮಿತಿಯ ನೇತೃತ್ವದಲ್ಲಿ ಡಿಸೆಂಬರ್ 1 ರಂದು ಸಭೆ ಸೇರಿ , ಖಲೀಲ್‌ರ ತಂದೆ ಅಬ್ದುಲ್ಲರೂ ಸೇರಿದಂತೆ ಕುಟುಂಬಸ್ಥರನ್ನು ಕರೆಸಿ ದೀರ್ಘ ಸಭೆಯನ್ನು ನಡೆಸಿ ಡಿಸೆಂಬರ್ 9ರಂದು ಖಲೀಲ್‌ನನ್ನು ಸುಳ್ಯದ ಸಂಧಾನ ಸಭೆಗೆ ಕರೆತರುವಂತೆ ಅವರ ತಂದೆಗೆ ನಿರ್ದೇಶನವನ್ನು ನೀಡಲಾಗಿತ್ತು. ಇದಕ್ಕೆ ಖಲೀಲ್ ಕುಟುಂಬಸ್ಥರು ಒಪ್ಪಿದ್ದರು. ಸಭೆಗೆ ಖಲೀಲ್ ಬಾರದ ಕಾರಣ ಅಂತಿಮ ನಿರ್ಣಯವನ್ನು ಮಂಡಿಸಿ ಪ್ರಕರಣಕ್ಕೆ ಸುಖಾಂತ್ಯಗೊಳಿಸಲು ಮುಸ್ಲಿಂ ಮುಖಂಡರಿಗೆ ಸಾಧ್ಯವಾಗಲಿಲ್ಲ. ಖಲೀಲ್ ಬರುವವರೆಗೆ ಆಸಿಯಾರನ್ನು ಅಬ್ದುಲ್ಲರವರು ಅವರ ಮನೆಗೆ ಕರೆದುಕೊಂಡು ಹೋಗಬೇಕೆಂದು ಜಮಾಯತ್ ಕಮಿಟಿ ಹೇಳಿದುದನ್ನು ತಂದೆ ಅಬ್ದುಲ್ಲರು ಮತ್ತು ಅವರ ಇನ್ನೊಬ್ಬ ಮಗ ಶಿಹಾಬ್‌ ಒಪ್ಪಲಿಲ್ಲ ಎನ್ನಲಾಗಿದೆ. ಈ ಎಲ್ಲ ಕಾರಣಗಳಿಂದ ಆಸಿಯಾ ಸುಳ್ಯ ಗಾಂಧಿನಗರದ ಕಟ್ಟೆಕಾರ್ ಫೂಟ್‌ವೇರ್ ಮಳಿಗೆಗೆ ಆಗಮಿಸಿದ್ದು, ಮಳಿಗೆಯಲ್ಲೇ ಕುಳಿತಿದ್ದಾರೆ. ತನ್ನ ಗಂಡ ಖಲೀಲ್ ಅಂಗಡಿಗೆ ಬಂದು ತನ್ನನ್ನು ಭೇಟಿಯಾಗುವವರೆಗೆ ಇಲ್ಲೇ ಇರುವುದಾಗಿ ಹೇಳುತ್ತಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

10/12/2020 03:09 pm

Cinque Terre

23.16 K

Cinque Terre

9