ಕಾಪು: ಉಡುಪಿ ಜಿಲ್ಲೆಯ ಕಾಪುವಿನ ವಸತಿ ಸಂಕೀರ್ಣವೊಂದರಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಮಹಿಳೆಯೋರ್ವರು ಹೃದಯಾಘಾತದಿಂದ ಮೃತ ಪಟ್ಟ ಘಟನೆ ಒಂದು ವಾರದ ಬಳಿಕ ಬೆಳಕಿಗೆ ಬಂದಿದೆ.
ಕಾಪುವಿನ ಸಿಟಿ ಸೆಂಟರ್ ವಸತಿ ಸಂಕೀರ್ಣದಲ್ಲಿ ಪುತ್ತೂರಿನ ನಿವಾಸಿ ಶ್ರೀಮತಿ ವಿದ್ಯಾ ಸರಸ್ವತಿ ಎಂಬುವರು ವಾಸಿಸುತ್ತಿದ್ದರು. ಅವರು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಅವರು ಬೆಳಿಗ್ಗೆ ಕೆಲಸಕ್ಕೆ ತೆರಳಿದವರು ಸಂಜೆ ಮನೆಗೆ ಬರುತ್ತಿದ್ದರು. ಹೀಗಾಗಿ ಅವರು ಸಂಕೀರ್ಣದ ಯಾರೊಂದಿಗೂ ಬೆರೆಯುತ್ತಿರಲಿಲ್ಲ.
ಸೋಮವಾರ ಬೆಳಗ್ಗಿನ ಜಾವ ಅವರ ರೂಮಿನಿಂದ ಕೆಟ್ಟ ವಾಸನೆ ಹೊರ ಬರುತ್ತಿದ್ದದ್ದನ್ನು ಗಮನಿಸಿದ ಪಕ್ಕದ ಕೋಣೆಯ ನಿವಾಸಿಗಳು ಕಾಪು ಪೋಲಿಸರಿಗೆ ತಿಳಿಸಿದ್ದಾರೆ. ಕಾಪು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ, ರೂಮಿನ ಬಾಗಿಲು ಒಡೆದು ನೋಡಿದಾಗ, ಮಹಿಳೆಯ ಮೃತದೇಹ ಕೊಳೆತ ರೀತಿಯಲ್ಲಿ ಪತ್ತೆಯಾಗಿದೆ.
ಮಹಿಳೆಯು ಹೃದಯ ರೋಗದಿಂದ ಬಳಲುತ್ತಿದ್ದು, ಆಕೆಗೆ ಹೃದಯಾಘಾತ ಆಗಿರಬೇಕೆಂಬ ಪೋಲಿಸರು ಶಂಕಿಸಿದ್ದಾರೆ.ಸ್ಥಳಕ್ಕೆ ಠಾಣಾಧಿಕಾರಿ ರಾಘವೇಂದ್ರ ಹಾಗೂ ಎಎಸ್‌ಐ ರಾಜೇಂದ್ರ ಮಣಿಯಾಣಿ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಮೃತದೇಹ ಹೊರತೆಗೆಯಲು ಕಾಪುವಿನ ಸಮಾಜ ಸೇವಕ ಸೂರಿ ಶೆಟ್ಟಿಯವರು ಸಹಕರಿಸಿದರು.
Kshetra Samachara
07/12/2020 03:57 pm