ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿವಾದ ಸೃಷ್ಟಿಸುವ ಗೋಡೆಬರಹ : ಕರಾವಳಿಯಲ್ಲಿ ಹೆಚ್ಚಿದ ಆತಂಕ

ಮಂಗಳೂರು : ಕಡಲನಗರಿ ಮಂಗಳೂರಿನಲ್ಲಿ ಉಗ್ರಗಾಮಿ ಸಂಘಟನೆಗಳಿಗೆ ಜಿಂದಾಬಾದ್ ಹೇಳಿ ಗೋಡೆಬರಹ ಬರೆಯಲಾಗಿತ್ತು.

ಇದರಿಂದ ಕರಾವಳಿಯಲ್ಲಿ ಆತಂಕ ಎದುರಾಗಿತ್ತು. ಪೊಲೀಸರು ದೇಶದ್ರೋಹಿಗಳಿಗಾಗಿ ಬಲೆ ಬಿಸಿದ್ದಾರೆ.

ಈ ಬೆನ್ನಲ್ಲೆ ಮತ್ತೊಂದು ಗೋಡೆ ಬರಹ ಈಗ ವಿವಾದ ಸೃಷ್ಟಿ ಮಾಡಿದೆ.

ಹೌದು. ಮಂಗಳೂರಿನ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸಕ್ರ್ಯೂಟ್ ಹೌಸ್ ರಸ್ತೆಯಲ್ಲಿರುವ ಅಪಾಟ್ ರ್ಮೆಂಟ್ ನ ಗೋಡೆ ಮೇಲೆ ಉಗ್ರಗಾಮಿ ಸಂಘಟನೆಗಳಿಗೆ ಜಿಂದಾಬಾದ್ ಹಾಕಿ ಗೋಡೆ ಬರಹ ಬರೆಯಲಾಗಿತ್ತು.

ಈ ಸಂದೇಶ ಇಡೀ ಕರಾವಳಿಯನ್ನೇ ಆತಂಕಕ್ಕೆ ದೂಡಿ ಕರಾವಳಿಯಲ್ಲಿ ಕಿಚ್ಚು ಹೆಚ್ಚಿಸಿತ್ತು.

ಹೋಂಡಾ ಆಕ್ಟೀವಾದಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿದ್ರು. ಆ ದೇಶದ್ರೋಹಿಗಳ ಜಾಡು ಹಿಡಿದು ಪೊಲೀಸರು ಕಾರ್ಯಾಚರಣೆ ಮಾಡುತ್ತಿದ್ದಾರೆ.

ಈ ಮಧ್ಯೆ ಮತ್ತೊಂದು ಈ ರೀತಿಯ ಗೋಡೆ ಬರಹ ಈಗ ಮಂಗಳೂರಿನಲ್ಲಿ ಕಾಣಿಸಿದೆ.

ಮಂಗಳೂರಿನ ಕೋರ್ಟ್ ರಸ್ತೆಯಲ್ಲಿರುವ ಹಳೇ ಪೊಲೀಸ್ ಔಟ್ ಪೋಸ್ಟ್. ಮೇಲೆ ಕಿಡಿಗೇಡಿಗಳು,’Gustuk e Rasool ek hi saza sar tan say juda’ ಎಂದು ಗೋಡೆಬರಹ ಬರೆದಿದ್ದಾರೆ.

ಪ್ರವಾದಿಗೆ ಕೋಪ ಬಂದರೆ ಒಂದೇ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದು ಎಂಬ ಅರ್ಥ ನೀಡುವ ಬರವಣಿಗೆ ಇದಾಗಿದೆ.

ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಉಗ್ರವಾದವನ್ನು ಸಹಿಸಿಕೊಳ್ಳಲು ದೇಶದಲ್ಲಿ ಜಾಗವಿಲ್ಲ, ಉಗ್ರವಾದಿಗಳು ಹೋಗಬೇಕಾಗಿದ್ದು ಮಸಣಕ್ಕೆ ಮಾತ್ರ.

ಖಬರ್ ಸ್ಥಾನಕ್ಕೆ ಕಳುಹಿಸುವಂಥ ಕೆಲಸವನ್ನು ಸೈನಿಕರು ಹಾಗೂ ಪೊಲೀಸರು ಸಮರ್ಥವಾಗಿ ಮಾಡುತ್ತಿದ್ದಾರೆ. ಹೀಗಾಗಿ ಇಂತಹ ದುಷ್ಕರ್ಮಿಗಳು ಎಚ್ಚರಿಕೆಯಿಂದರಬೇಕು ಅಂತ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಯು.ಟಿ.ಖಾದರ್, ನಗರದಲ್ಲಿ ಗೋಡೆ ಬರಹ ಬರೆಯುವುದನ್ನ ತೀವ್ರವಾಗಿ ಖಂಡಿಸುತ್ತೇವೆ. ಇದನ್ನ ಯಾರೇ ಆದರೂ ಸಹಿಸಲು ಸಾಧ್ಯವಿಲ್ಲ.

ಇದರ ಪತ್ತೆಗೆ ಬಿಜೆಪಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಜವಾಬ್ದಾರಿ. ಇವರಿಗೆ ಬೆಂಬಲವಾಗಿರುವರನ್ನ ಪತ್ತೆ ಹಚ್ಚಿ ಷಡ್ಯಂತ್ರ ಬಯಲು ಮಾಡಬೇಕಿದೆ. ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತವೆ.

ಒಂದು ವಾರದ ಒಳಗೆ ಈ ಆರೋಪಿಗಳ ಪತ್ತೆಯಾಗಬೇಕು. ಅದು ಬಿಟ್ಟು 15 ದಿನದ ಒಳಗೆ ಬಂಧನ ಆಗದೇ ಇದ್ರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡ್ತೇವೆ ಎಂದಿದ್ದಾರೆ.

ಸದ್ಯ ಗೋಡೆಬರಹ ಸಂಬಂಧ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

30/11/2020 02:44 pm

Cinque Terre

15.57 K

Cinque Terre

3

ಸಂಬಂಧಿತ ಸುದ್ದಿ