ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಗೋಡೆ ಮೇಲೆ ಉಗ್ರ ಸಂಘಟನೆ ಪರ ಬರಹ; ಪೊಲೀಸರಿಂದ ಪರಿಶೀಲನೆ

ಮಂಗಳೂರು: ನಗರದ ಪ್ರಮುಖ ಬೀದಿಯೊಂದರಲ್ಲಿ 'ಲಷ್ಕರ್ ಜಿಂದಾಬಾದ್' ಅನ್ನೋ ಗೋಡೆ ಬರಹ ಕಾಣಿಸಿಕೊಂಡಿದೆ.

ನಗರದ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿರೋ ಪ್ರಮುಖ ಅಪಾರ್ಟ್ ಮೆಂಟ್ ಕೆಳಗಿನ ಕಂಪೌಂಡ್ ಗೋಡೆಯಲ್ಲಿ ಬರಹ ಬರೆಯಲಾಗಿದೆ.‌

"Do not force us invite Lashkar-E-Toiba And Taliban To Deal with sangis and Manvadis" ಎಂದು ಆಂಗ್ಲ ಭಾಷೆಯಲ್ಲಿ ಬರೆಯಲಾಗಿದ್ದು, ಅದರ ಕೆಳಗಡೆ ಹ್ಯಾಷ್ ಟ್ಯಾಗ್ ಬಳಸಿ 'ಲಷ್ಕರ್ ಜಿಂದಾಬಾದ್' ಎಂದು ಎರಡು ಬಾರಿ ಕಪ್ಪು ಬಣ್ಣದ ಸ್ಪ್ರೇ ಪೈಂಟ್ ಬಳಸಿ ಬರೆಯಲಾಗಿದೆ.

ಈಗಾಗಲೇ ಸ್ಥಳಕ್ಕೆ ಕದ್ರಿ ಪೊಲೀಸರು ಆಗಮಿಸಿದ್ದು, ಅದನ್ನು ಬಣ್ಣ ಬಳಿದು ಅಳಿಸಿ ಹಾಕಿದ್ದಾರೆ.‌ ಗೋಡೆ ಮೇಲೆ ದೇಶವಿರೋಧಿ ಸಂಘಟನೆಗೆ ಜೈಕಾರ ಬರೆದ ಬುದ್ಧಿಹೀನ ಕಿಡಿಗೇಡಿಗಳ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ.‌

Edited By : Manjunath H D
Kshetra Samachara

Kshetra Samachara

27/11/2020 10:45 am

Cinque Terre

31.31 K

Cinque Terre

5

ಸಂಬಂಧಿತ ಸುದ್ದಿ