ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಗ್ಧ ಜನರನ್ನು ವಂಚಿಸಿದ ವೀರಬಥಿರಾ ಫ್ರಾಡ್ ಕಂಪನಿ ಏನಿದು ಮಹಾಮೋಸ !

ರಾಜ್ಯದಲ್ಲಿ ಸಂಚಲನ ಮೂಡಿಸುತ್ತಿದೆ ಇನ್ನೊಂದು ನಕಲಿ ಕಂಪನಿ, ಮುಗ್ಧ ಜನರನ್ನು ಯಾಮಾರಿಸಿ ನಕಲಿ ವೆಬ್ಸೈಟ್ ಗಳನ್ನ ಸೃಷ್ಟಿಸಿಕೊಂಡು ಜನರ ಹಣವನ್ನು ಕೋಟಿ ಕೋಟಿ ಲೂಟಿ ಮಾಡುತ್ತಿದೆ.

ಮುಗ್ಧ ಜನರನ್ನು ಭೇಟಿಯಾದ ತಂಡ ಮೊದಲು ಮಾಡುವುದು ಇಷ್ಟೇ, ನಮ್ಮ ಕಂಪನಿಗೆ 3000 ಸಾವಿರ ಕೋಟಿ ಟ್ರಾಂಜಾಕ್ಷನ್ ತೋರಿಸಬೇಕು, ನಮ್ಮ ಕಂಪನಿಯಿಂದ ಟೆಕ್ಸ್ ಟೈಲ್ ಯಾಲಕ್ಕಿ ವ್ಯಾಪಾರ, ಇನ್ನೂ ಹತ್ತು ಹಲವು ವಿಚಾರಗಳನ್ನ ಹೇಳಿ ಜನರನ್ನು ದಾರಿ ತಪ್ಪಿಸುತ್ತಾರೆ.

ಇನ್ನು ಕೆಲವರು ನಮ್ಮ ಕಂಪನಿಗೆ 80 ಬರುವ ಲಾಭಾಂಶ ನಮ್ಮ ಎಲ್ಲಾ ಸದಸ್ಯರಿಗೆ ನಾವು ಕೊಡುತ್ತೇವೆ ಎಂದು ಮೋಟಿವೇಶನ್ ಸ್ಪೀಚ್ ಮಾಡುತ್ತಾರೆ. ಇದನ್ನು ನಂಬಿದ ಮುಗ್ಧ ಜನರು ಸಾಲಸೂಲ ಮಾಡಿ ಈ ಕಂಪನಿಗೆ ಹಣ ಹಾಕುತ್ತಾರೆ. ಒಂದು ವಾರ ಅಥವಾ ಹದಿನೈದು ದಿನ ನಿಮ್ಮ ಅಕೌಂಟಿಗೆ ಹಣ ಬರುತ್ತೆ ಅದು ಹೇಗೆ ಗೊತ್ತಾ !?

ಸಾವಿರದ ಇನ್ನೂರು ರೂಪಾಯಿ ಕೊಟ್ಟವರಿಗೆ ಪ್ರತಿದಿನ 20 ರೂಪಾಯಿ ,5000 ಕೊಟ್ಟವರಿಗೆ ಪ್ರತಿದಿನ 75 ರೂಪಾಯಿ ಸಿಗುತ್ತದೆ,

10000 ಸಾವಿರ ಹಾಕಿದವರಿಗೆ ಪ್ರತಿದಿನ 150 ಸಿಗುತ್ತದೆ,25000ಸಾವಿರ ಹಾಕಿದವರಿಗೆ 375 ರೂಪಾಯಿ ಹಾಕುತ್ತೇನೆ ಎಂದು ಹೀಗೆ ಪ್ಲಾನ್ ಕೊಡುತ್ತಾರೆ.

ನಂತರ ಎರಡು ಅಥವಾ ಮೂರು ವಾರಗಳ ತನಕ ಹೇಳಿದ ಹಾಗೆ ಹಣವು ಅಕೌಂಟ್ಗೆ ಬರುತ್ತದೆ. ಆದರೆ 4ನೇ ವಾರದಿಂದ ವೆಬ್ಸೈಟ್ ಲಾಕ್ ಆಗಿರುತ್ತೆ ಕಾಲ್ ಮಾಡಿದ್ರೆ ಸರಿಯಾಗಿ ರೆಸ್ಪೊಂಡ್ ಮಾಡಲ್ಲ.

ಅದರಲ್ಲೂ ಒಬ್ಬ ತಮಿಳುನಾಡು ಎಂಎಲ್ಎ ಅಂತ ಹೇಳಿಕೊಂಡಿರುವ ವ್ಯಕ್ತಿ ಇದಕ್ಕೆ ಮಾಸ್ಟರ್ ಮೈಂಡ್ ಆತನೇ ಗೋವಾಪ್ಪ ಅಂಜಿ. ರಾಜ್ಯದಲ್ಲಿ ಲಕ್ಷಾಂತರ ಜನರು ಈ ಕಂಪನಿಯಿಂದ ಮೋಸ ಹೋಗಿದ್ದಾರೆ, ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಹಲವು ಜನರು ಮೋಸ ಹೋಗಿದ್ದು ಬೆಳಕಿಗೆ ಬಂದಿದೆ.

ಪ್ರಮುಖವಾಗಿ ಕನ್ನಿಕಾ ಬೆಂಗಳೂರು ಹಾಗೂ ರಫೀಕ್ ಹಾಸನ ಹಾಗೂ ರಾಜೇಶ್ ಜನ್ನಾಡಿ , ಉಡುಪಿ ಜಿಲ್ಲೆಯ ಇನ್ನೊಬ್ಬ ಶರತ್ ಇಷ್ಟು ಜನ ಇದರಲ್ಲಿ ಸೇರಿಕೊಂಡಿದ್ದಾರೆ ಎಂದು ಮೋಸ ಹೋದವರ ಅಳಲು ತೋಡಿಕೊಂಡಿದ್ದಾರೆ.

Edited By : Manjunath H D
Kshetra Samachara

Kshetra Samachara

20/11/2020 09:35 pm

Cinque Terre

42.16 K

Cinque Terre

13

ಸಂಬಂಧಿತ ಸುದ್ದಿ