ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಡಕೆ ವ್ಯಾಪಾರಿಗೆ ಚೂರಿ ಇರಿತ ಪ್ರಕರಣ; ಬಲೆಗೆ ಬಿದ್ದ ಖದೀಮರು

ಉಪ್ಪಿನಂಗಡಿ: ಚೂರಿಯಿಂದ ಇರಿದು ಅಡಕೆ ವ್ಯಾಪಾರಿಯನ್ನು ದರೋಡೆ ನಡೆಸಿದ ಮೂವರು ದರೋಡೆಕೋರರನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪರಾರಿಯಾದ ಇದೇ ತಂಡದ ಇನ್ನಿಬ್ಬರು ದರೋಡೆಕೋರರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಕೋಟೆಕನಿ ಮಿತ್ತಪದವಿನ ಮೊಹಮ್ಮದ್‌ ಅಶ್ರಫ್‌ ಎಂಬವರ ಪುತ್ರ ಅಪ್ರೀದ್‌ (22), ಸೋಮವಾರಪೇಟೆ ತಾಲೂಕಿನ ದೊಡ್ಡಹನಕೊಡು ಗ್ರಾಮದ ಕಾಗಡಿಕಟ್ಟೆ ನಿವಾಸಿ ಅಬ್ದುಲ್‌ ಎಂಬವರ ಪುತ್ರ ಜುರೈಝ್‌ (20) ಮತ್ತು ಮೂಲತಃ ಬಂಟ್ವಾಳ ತಾಲೂಕಿನ ಬಡಗಬೆಲ್ಲೂರು ಗ್ರಾಮದ ಶಾಲೆ ಬಳಿ ನಿವಾಸಿ, ಪ್ರಸ್ತುತ ಕಡೆಶಿವಾಲಯ ದೊಡ್ಡಾಜೆಯಲ್ಲಿ ವಾಸವಿರುವ ಅಬ್ದುಲ್‌ ಸತ್ತಾರ್‌ ಎಂಬವರ ಪುತ್ರ ಮೊಹಮ್ಮದ್‌ ತಂಝೀಲ್‌ (22) ಬಂಧಿತ ಆರೋಪಿಗಳು. ಇವರಿಂದ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ, ಚೂರಿ, ಮೂರು ಮೊಬೈಲ್‌ ಹಾಗೂ ಸುಲಿಗೆ ಮಾಡಿದ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಬಂಟ್ವಾಳ ತಾಲೂಕಿನ ಪೆರ್ನೆಯ ಆಶೀರ್ವಾದ ಕಟ್ಟಡದಲ್ಲಿ ಅಡಿಕೆ ಖರೀದಿ ಅಂಗಡಿ ನಡೆಸುತ್ತಿದ್ದ ದೀಪಕ್‌ ಜಿ. ಶೆಟ್ಟಿ ಅ.27 ರಂದು ಸಂಜೆ ಅಂಗಡಿಗೆ ಬಾಗಿಲು ಹಾಕಿ ಅಡಿಕೆ ಮಾರಾಟ ಮಾಡಿದ 3.50ಲಕ್ಷ ನಗದಿನೊಂದಿಗೆ ಪದೆಬರಿಯ ತನ್ನ ಮನೆಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಆ್ಯಕ್ಟೀವಾದಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದ ದರೋಡೆಕೋರರ ತಂಡ ಬಿಳಿಯೂರಿನ ಪೆಜಕುಡೆ (ಪಜೆಕೋಡಿ) ಎಂಬಲ್ಲಿ ಅವರನ್ನು ಅಡ್ಡಗಟ್ಟಿ ಚೂರಿಯಿಂದ ಇರಿದಿದ್ದರು. ಹಾಗೂ ಅವರಲ್ಲಿದ್ದ 3.50ಲಕ್ಷ ನಗದು, ಚಿನ್ನದ ಸರ ಹಾಗೂ ಲಾವಾ ಕಂಪೆನಿಯ ಮೊಬೈಲ್‌ ಸೆಟ್‌ ಅನ್ನು ದರೋಡೆ ನಡೆಸಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ದೀಪಕ್‌ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಇದೀಗ ದರೋಡೆಕೋರರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

10/11/2020 11:59 am

Cinque Terre

23.72 K

Cinque Terre

3

ಸಂಬಂಧಿತ ಸುದ್ದಿ