ಕುಂದಾಪುರ: ಮದುವೆ ನಿಂತು ಹೋಗಿದ್ದಕ್ಕೆ ಮನನೊಂದು ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡಾದಲ್ಲಿ ನಡೆದಿದೆ.
ನಾಡ ಗುಡ್ಡೆಯಂಗಡಿ ನಿವಾಸಿ ಮುರಳೀಧರ ನಾಯಕ್ ಅವರ ಪುತ್ರಿ ಸ್ಫೂರ್ತಿ ಎಂ. ನಾಯಕ್ (26) ಆತ್ಮಹತ್ಯೆ ಮಾಡಿಕೊಂಡವರು.
ಸ್ಫೂರ್ತಿ ಅವರಿಗೆ ಆಗಸ್ಟ್ 16 ರಂದು ಉಡುಪಿಯ ಗೋವರ್ಧನ ನಾಯಕ್ ಎಂಬವರ ಜೊತೆ ಮದುವೆ ನಿಶ್ಚಿತಾರ್ಥ ಮಾಡಿದ್ದು, ಬಳಿಕ ಕಾರಣಾಂತರಗಳಿಂದ ಈ ಮದುವೆ ನಿಂತು ಹೋಗಿತ್ತು.
ಇದೇ ವಿಚಾರದಲ್ಲಿ ಸ್ಫೂರ್ತಿ ಬಹಳಷ್ಟು ನೊಂದುಕೊಂಡಿದ್ದರು.
ಇದೇ ನೋವು, ದುಃಖದಲ್ಲಿ ನ. 6 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಈ ಹೆಣ್ಣು ಮಗಳು ಮೃತಪಟ್ಟಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
09/11/2020 01:38 pm