ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಜೇಶ್ವರ: ಯುವಕ ಹಿಮಾಚಲ ಪ್ರದೇಶದಲ್ಲಿ ಮಂಜುಗಡ್ಡೆಯಲ್ಲಿ ಸಿಲುಕಿ ಮೃತ್ಯು

ಮಂಜೇಶ್ವರ: ತಿಂಗಳ ಹಿಂದೆ ಪ್ರವಾಸಕ್ಕೆಂದು ತೆರಳಿದ್ದ ಮಂಜೇಶ್ವರದ ಯುವಕನೋರ್ವ ಮಂಜುಗಡ್ಡೆಯಲ್ಲಿ ಸಿಲುಕಿ ಮೃತಪಟ್ಟ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಮೃತ ಯುವಕನನ್ನು ಮಂಜೇಶ್ವರ ಮಜೀರ್ ಪಳ್ಳ ನಿವಾಸಿ ಸಿನಾನ್ (28) ಎಂದು ಗುರುತಿಸಲಾಗಿದೆ.

ವಿದೇಶದ ಕತಾರ್‌ನಲ್ಲಿ ಉದ್ಯೋಗದಲ್ಲಿದ್ದ ಸಿನಾನ್ ಆರು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದ. ಪ್ರವಾಸಕ್ಕೆಂದು ತೆರಳಿದ್ದ ಸಿನಾನ್ ದೆಹಲಿಯಿಂದ ತೆರಳಿ ಅಲ್ಲಿಂದ ಹಿಮಾಚಲಪ್ರದೇಶಕ್ಕೆ ತೆರಳಿರುವುದಾಗಿ ಮಾಹಿತಿ ಲಭಿಸಿದೆ. ಎರಡು ವಾರಗಳ ಹಿಂದೆ ಮನೆಯವರು ಸಂಪರ್ಕಿಸಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಸೋಮವಾರ ಬೆಳಿಗ್ಗೆ ಹಿಮಾಚಲ ಪ್ರದೇಶ ಪೊಲೀಸರು ಸಿನಾನ್ ಮಂಜುಗಡ್ಡೆಯಲ್ಲಿ ಸಿಲುಕಿ ಮೃತಪಟ್ಟಿರುವುದಾಗಿ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.

Edited By : Nagaraj Tulugeri
PublicNext

PublicNext

12/10/2022 03:30 pm

Cinque Terre

25.63 K

Cinque Terre

0

ಸಂಬಂಧಿತ ಸುದ್ದಿ