ಮಲ್ಪೆ: ಮಲ್ಪೆ ಬಂದರಿನಲ್ಲಿ ಹನುಮ ನಿಧಿ ಬೋಟ್ ನಲ್ಲಿ ಮೀನು ಅನ್ ಲೋಡ್ ಮಾಡುವಾಗ ಕಾರ್ಮಿಕರೊಬ್ವರು ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ತೊಟ್ಟಂ ನಿವಾಸಿ ಪುರಂದರ (42) ಮೃತ ಕಾರ್ಮಿಕ.ಇವರು ರಾತ್ರಿ ಹೊತ್ತು ಬಂದರಿನಲ್ಲಿ ಮೀನು ಅನ್ ಲೋಡ್ ಮಾಡುವಾಗ ಆಕಸ್ಮಿಕ ವಾಗಿ ಕಾಲುಜಾರಿ ನೀರಿಗೆ ಬಿದ್ದಿದ್ದರು.ತಕ್ಷಣ ಆಪದ್ಭಾಂಧವ ಈಶ್ವರ್ ಮಲ್ಪೆ ಆಗಮಿಸಿ ಇವರನ್ನು ಮೇಲಕ್ಕೆತ್ತಿದ್ದಾರೆ. ಬಳಿಕ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರು ಪರೀಕ್ಷಿಸಿ ನೋಡಿದಾಗ ಮೃತಪಟ್ಟಿದ್ದಾರೆ. ಮಲ್ಪೆ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Kshetra Samachara
05/09/2022 02:14 pm