ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಜಪ್ಪಿನ ಮೊಗರು ಹೆದ್ದಾರಿಯಲ್ಲಿ ಹಿಟ್ & ರನ್: ವಲಸೆ ಕಾರ್ಮಿಕ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ

ಉಳ್ಳಾಲ: ಹೆದ್ದಾರಿ ಅಂಚಿನ ಗಿಡಗಂಟೆಗಳನ್ನ ಕಡಿದು ಸ್ವಚ್ಛತೆಯಲ್ಲಿ ನಿರತರಾಗಿದ್ದ ಕಾರ್ಮಿಕರಿಗೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ರಭಸಕ್ಕೆ ಓರ್ವ ವಲಸೆ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೋರ್ವನ‌ ಬೆನ್ನು ಮೂಳೆ ಮರಿಯಲ್ಪಟ್ಟು ಆಸ್ಪತ್ರೆ ಸೇರಿದ ಘಟನೆ ಇಂದು ಬೆಳ್ಳಂ ಬೆಳಗ್ಗೆ ರಾ.ಹೆ .66 ರ ಜಪ್ಪಿನ ಮೊಗರುವಿನಲ್ಲಿ ಸಂಭವಿಸಿದೆ.

ಮೃತ ಯುವಕ ಬಿಹಾರ ಮೂಲದ ಎಮ್.ಡಿ ವಿಕ್ಕಿ ಖಾನ್(26)ಮತ್ತು ಗಾಯಗೊಂಡ ವ್ಯಕ್ತಿ ಸಾಸ್ತಾನ ನಿವಾಸಿ ಗೋಪಾಲ ಪೂಜಾರಿ(53) ಎಂದು ತಿಳಿದು ಬಂದಿದೆ.ಜಪ್ಪಿನ ಮೊಗರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಪಕ್ಕದಲ್ಲೇ ಘಟನೆ ಸಂಭವಿಸಿದೆ.ಹೆದ್ದಾರಿಯ ಅಂಚಿನಲ್ಲಿ ಹಾಕಿದ್ದ ತಗಡಿನ ರಕ್ಷಣಾ ಬೇಲಿಯ ಬಳಿಯಲ್ಲಿ ನಾಲ್ವರು ವಲಸೆ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ತೊಕ್ಕೊಟ್ಟಿನಿಂದ ಮಂಗಳೂರಿಗೆ ಧಾವಿಸುತ್ತಿದ್ದ ವಾಹನವೊಂದು ಇಬ್ಬರು ಕಾರ್ಮಿಕರಿಗೆ ಬಲವಾಗಿ ಢಿಕ್ಕಿ ಹೊಡೆದು ಪರಾರಿಯಾಗಿದೆ.

ಢಿಕ್ಕಿಯ ರಭಸಕ್ಕೆ ಓರ್ವ ಕಾರ್ಮಿಕ ಯುವಕ ಸ್ಥಳದಲ್ಲೇ ಅಸು ನೀಗಿದರೆ ಮತ್ತೋರ್ವ ಗಂಭೀರ ಗಾಯಗೊಂಡಿದ್ದು ಆತನನ್ನ ಸಂಚಾರಿ ಪೊಲೀಸರು ತಕ್ಷಣ ಆಸ್ಪತ್ರೆ ಸೇರಿಸಿದ್ದಾರೆ. ಘಟನಾ ಸ್ಥಳದಲ್ಲಿದ್ದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಇಬ್ಬರು ಪಿಕ್ ಅಪ್ ವಾಹನವೊಂದು ಢಿಕ್ಕಿ ಹೊಡೆದು ಪರಾರಿಯಾಗಿರುವುದಾಗಿ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದು ಅವರ ಮಾಹಿತಿಯಂತೆ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ತನಿಖೆ ನಡಸುತ್ತಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

12/08/2022 10:28 am

Cinque Terre

18.92 K

Cinque Terre

0

ಸಂಬಂಧಿತ ಸುದ್ದಿ