ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾತ್ರಿ ವೇಳೆ ಸರಣಿ ಅಪಘಾತ: ಅಪಘಾತಕ್ಕೆ ಕಾರಣವಾದ ಬೈಕ್ ಸವಾರ ಪರಾರಿ!

ಉಡುಪಿ: ರಾಂಗ್ ಸೈಡ್ ನಿಂದ ಬಂದ ಬೈಕ್ ಸವಾರನನ್ನು ತಪ್ಪಿಸಲು ಹೋದ ಟೆಂಪೋ ರಿಕ್ಷಾವೊಂದು ,ಕಾರೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪಲ್ಟಿಯಾಗಿ ಬಿದ್ದು ಸರಣಿ ಅಪಘಾತ ಸಂಭವಿಸಿದೆ.

ಅದಿತ್ಯವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಉಡುಪಿಯಿಂದ ಕಿನ್ನಿಮೂಲ್ಕಿ ಕಡೆಗೆ ಟೆಂಪೋ ರಿಕ್ಷಾ ಹೋಗುತ್ತಿದ್ದಾಗ ಮಂಜುನಾಥ್ ಪೆಟ್ರೋಲ್ ಬಂಕ್ ಸಮೀಪ ರಾಂಗ್ ಸೈಡ್ ನಿಂದ ರಸ್ತೆ ಪ್ರವೇಶಸುತ್ತಿದ್ದ ಬೈಕನ್ನು ಗಮನಿಸಿದ ಟೆಂಪೋ ಚಾಲಕ ಬೈಕ್ ತಪ್ಪಿಸಲು ಪ್ರಯತ್ನಿಸಿದ್ದಾರೆ.ಅಷ್ಟರಲ್ಲಿ ಅರ್ಧ ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ರಿಡ್ಜ್ ಕಾರಿಗೆ ಡಿಕ್ಕಿ ಹೊಡೆದಿದೆ .

ಈ ಸಂಧರ್ಭದಲ್ಲಿ ಹಿಂದಿನಿಂದ ಬಂದ ಮಾರುತಿ ವ್ಯಾಗನರ್ ಕಾರು ಟೆಂಪೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪಲ್ಟಿ ಹೊಡೆದಿದೆ. ಅಪಘಾತಕ್ಕೆ ಕಾರಣನಾದ ಬೈಕ್ ಸವಾರ ಬೈಕ್ ನಿಲ್ಲಸದೇ ಪರಾರಿಯಾಗಿದ್ದಾನೆ.ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಅಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By :
Kshetra Samachara

Kshetra Samachara

04/04/2022 09:25 am

Cinque Terre

18.15 K

Cinque Terre

0

ಸಂಬಂಧಿತ ಸುದ್ದಿ