ಉಡುಪಿ: ಸಮುದ್ರ ಮಧ್ಯದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ಸಾಸ್ತಾನ ಕೋಡಿಯ ಚಂದ್ರ ಮರಕಾಲ (51) ಅವರು ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದು, ಶವವನ್ನು ಮೇಲೆತ್ತಲಾಗಿದೆ.
ಇವರು ಸಾಸ್ತಾನದ ರವಿ ಹಾಗೂ ಇತರರೊಂದಿಗೆ ಸೇರಿಕೊಂಡು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ
ಹೊರಟಿದ್ದರು. ಬಳಿಕ ದುರಂತ ನಡೆದಿದ್ದು, ಅವರ ಮೃತದೇಹವನ್ನು ಮಲ್ಪೆ ಬಂದರಿಗೆ ತಂದು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
05/01/2022 11:16 am