ಬಂಟ್ವಾಳ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೆಲ್ಕಾರ್ ಜಂಕ್ಷನ್‌ನ ಕೊಣಾಜೆಗೆ ತಿರುಗುವ ಭಾಗದಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದ ಬೈಕ್ ಮತ್ತು ಲಾರಿ ಅಪಘಾತದಲ್ಲಿ ಸವಾರ ಸ್ಥಳೀಯ ಸರ್ವೀಸ್ ಸ್ಟೇಶನ್ ಉದ್ಯೋಗಿ ಗಣೇಶ್ (36) ಸಾವನ್ನಪ್ಪಿದ್ದಾರೆ.
ಮಾರ್ನಬೈಲ್ ಸರ್ವೀಸ್ ಸ್ಟೇಶನ್ ನಲ್ಲಿ ದುಡಿಯುತ್ತಿದ್ದ ಗಣೇಶ್ ಅವರು ಬೈಕನ್ನು ಕೊಣಾಜೆ ಕಡೆ ತಿರುಗಿಸುತ್ತಿದ್ದ ಸಂದರ್ಭ ಲಾರಿ ಡಿಕ್ಕಿ ಹೊಡೆದಿದೆ. ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೊರಟ ಸಂದರ್ಭ ಲಾರಿ ಮೆಲ್ಕಾರ್ ಸರ್ಕಲ್‌ಗೆ ಡಿಕ್ಕಿಯಾಗಿ ಜಖಂಗೊಂಡಿದೆ.
ಕೂಡಲೇ ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ತೀವ್ರ ಗಾಯಗೊಂಡಿದ್ದ ಸವಾರ ಮೃತಪಟ್ಟಿದ್ದಾರೆ. ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ನಗರ ಇನ್ಸ್ ಪೆಕ್ಟರ್ ವಿವೇಕಾನಂದ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಎಸ್ಸೈ ರಾಜೇಶ್ ಹಾಜರಿದ್ದರು.
Kshetra Samachara
17/11/2021 01:29 pm