ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುರುಪುರ: ಟಿಪ್ಪರ್‌ಗೆ ಟಿಪ್ಪರ್ ಡಿಕ್ಕಿ; ಚಾಲಕನಿಗೆ ಗಂಭೀರ ಗಾಯ

ಬಜಪೆ: ಟಿಪ್ಪರ್‌ಗೆ ಮತ್ತೊಂದು ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 169ರ ಬೆಳ್ಳಿ ಬೆಟ್ಟು ಬಸ್‌ ನಿಲ್ದಾಣದ ಬಳಿ ಇಂದು ನಡೆದಿದೆ.

ಕೈಕಂಬದತ್ತ ಹೋಗುತ್ತಿದ್ದ ಟಿಪ್ಪರ್ ಒಂದರ ಚಾಲಕ ಮಂಗಳೂರಿನತ್ತ ಸಾಗುತ್ತಿದ್ದ ಬಸ್‌ಗೆ ಸೈಡ್ ಕೊಡುವ ಧಾವಂತದಲ್ಲಿ ಬ್ರೇಕ್ ಹಾಕಿದ್ದಾನೆ. ಪರಿಣಾಮ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಟಿಪ್ಪರ್ ಡಿಕ್ಕಿ ಹೊಡೆದಿದ್ದು, ಹಿಂದಿದ್ದ ಟಿಪ್ಪರ್ ಚಾಲಕನ ಕಾಲಿಗೆ ಗಂಭೀರ ಗಾಯವಾಗಿದೆ. ಇನ್ನು ಟಿಪ್ಪರ್ ಭಾಗ ನುಜ್ಜುಗುಜ್ಜಾಗಿದ್ದು, ಚಾಲಕನನ್ನು ಹೊರತೆಗೆಯಲು ಹರಸಾಹಸಪಡುವಂತಾಯಿತು. ಗಂಭೀರ ಗಾಯಗೊಂಡ ಟಿಪ್ಪರ್ ಚಾಲಕನನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

Edited By : Vijay Kumar
Kshetra Samachara

Kshetra Samachara

15/10/2021 08:49 pm

Cinque Terre

12.91 K

Cinque Terre

0

ಸಂಬಂಧಿತ ಸುದ್ದಿ