ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಲಾರಿ ತಲೆಯ ಮೇಲೆ ಹಾದು 'ಗೋಲ್ಡನ್' ಬೇಕರಿ ಮಾಲೀಕ ಸಾವು

ಪುತ್ತೂರು: ಇಲ್ಲಿನ ಬಲ್ನಾಡು ನಿವಾಸಿ ಪುತ್ತೂರಿನ ಎಂ.ಟಿ. ರೋಡ್ ಗೋಲ್ಡನ್ ಬೇಕರಿ ಮಾಲೀಕ ಅಬ್ದುಲ್ ಅಝೀಝ್ (35) ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ತನ್ನ ಮನೆಯಿಂದ ಅಂಗಡಿಗೆ ಬರುತ್ತಿದ್ದಾಗ ಬಲ್ನಾಡಿನಲ್ಲಿ ಲಾರಿ ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಲಾರಿಯ ಟಯರ್ ತಲೆಯ ಮೇಲೆಯೇ ಹಾದು ಹೋದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಎರಡು ವಾರಗಳಲ್ಲಿಯೇ ಅವರು ವಿದೇಶಕ್ಕೆ ಪಯಣಿಸಲು ಸಿದ್ಧತೆಯಲ್ಲಿದ್ದರು.

ಎರಡು ದಿನಗಳ ಹಿಂದೆ ಜೀಪೊಂದು ಕೆಟ್ಟು ನಿಂತ ಪರಿಣಾಮ ರಸ್ತೆ ಮೇಲೆ ಆಯಿಲ್ ಚೆಲ್ಲಿಕೊಂಡಿತ್ತು. ಇದರಿಂದ ದ್ವಿಚಕ್ರ ವಾಹನಗಳು ಸ್ಕಿಡ್ ಆಗುತ್ತಿದ್ದವು. ಅದೇ ಸ್ಥಳದಲ್ಲಿ ಇಂದು ಅಪಘಾತ ಸಂಭವಿಸಿದ್ದು, ಅಝೀಜ್ ಅವರ ಸ್ಕೂಟರ್ ಸ್ಕಿಡ್ ಆಗಿಯೇ ಲಾರಿಯಡಿ ಬಿದ್ದಿರಬಹುದೇ ಎಂದು ಸಂಶಯಿಸಲಾಗಿದೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

10/10/2021 04:15 pm

Cinque Terre

22.41 K

Cinque Terre

2

ಸಂಬಂಧಿತ ಸುದ್ದಿ