ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು : ಹೆಜಮಾಡಿಯ ವ್ಯಕ್ತಿಯ ಶವ ಕಾಪು ಪಡು ಬೀಚ್‌ನಲ್ಲಿ ಪತ್ತೆ

ಕಾಪು : ಹೆಜಮಾಡಿಯಲ್ಲಿ ಸಮುದ್ರ ಪಾಲಾಗಿರುವ ಸಂತೋಷ್ ಪೂಜಾರಿ (40) ಎಂಬಾತನ ಮೃತದೇಹವು ಕಾಪು ಪಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದ ಸಮುದ್ರ ಕಿನಾರೆಯಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದೆ.

ಸಮುದ್ರದಲ್ಲಿ ಅಪರಿಚಿತ ಶವವೊಂದು ತೇಲಿ ಬರುತ್ತಿರುವ ಬಗ್ಗೆ ಸ್ಥಳೀಯರಿಗೆ ದೊರಕಿದ ಮಾಹಿತಿಯ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿ ಕಾಪು ಪುರಸಭೆಯ ವಾಹನ ಚಾಲಕ ನಿತೇಶ್ ಕುಮಾರ್ ಅವರು ಶವವನ್ನು ಮೇಲಕ್ಕೆತ್ತಿದ್ದಾರೆ. ಬಳಿಕ ಸೂರಿ ಶೆಟ್ಟಿ ಅವರ ನೇತೃತ್ವದಲ್ಲಿ ಶವವನ್ನು ಉಡುಪಿ ಶವಾಗಾರಕ್ಕೆ ಸಾಗಿಸಲಾಗಿದೆ.

ವಿವಾಹಿತನಾಗಿರುವ ಸಂತೋಷ್ ಪೂಜಾರಿ ಹೆಜಮಾಡಿ ಪೇಟೆಯಲ್ಲಿ ಸೈಕಲ್ ಅಂಗಡಿ ನಡೆಸುತ್ತಿದ್ದು ಸಾವಿಗೆ ನಿಖರವಾದ ಕಾರಣಗಳು ತಿಳಿದು ಬಂದಿಲ್ಲ. ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

21/09/2021 09:32 pm

Cinque Terre

21.74 K

Cinque Terre

0

ಸಂಬಂಧಿತ ಸುದ್ದಿ