ಕಡಬ: ಹೊಸ್ಮಠ ಸೇತುವೆ ಬಳಿ ಬೈಕ್ ಸ್ಕಿಡ್; ಮಹಿಳೆ ಮೃತ್ಯು

ಕಡಬ: ಇಲ್ಲಿನ ಹೊಸ್ಮಠ ಸೇತುವೆಯ ಬಳಿ ಅವೈಜ್ಞಾನಿಕವಾಗಿ ಅಳವಡಿಸಲಾಗಿರುವ ಹಂಪ್ ನಿಂದಾಗ ವೃದ್ಧ ಮಹಿಳೆಯೋರ್ವರು ಮೃತಪಟ್ಟ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

ಮೃತ ಮಹಿಳೆಯನ್ನು ವೇಣೂರಿನ ಬಜಾಲು ಸಮೀಪದ ವಿರಂದಲೆ ನಿವಾಸಿ ವೆಂಕಪ್ಪ ಸಾಲ್ಯಾನ್ ಎಂಬವರ ಪತ್ನಿ ಸುಂದರಿ (65) ಎಂದು ಗುರುತಿಸಲಾಗಿದೆ.

ಮಹಿಳೆಯು ತನ್ನ ಮೊಮ್ಮಗನೊಂದಿಗೆ ಇಂದು ಬೆಳಗ್ಗೆ ವೇಣೂರಿನಿಂದ ಕಡಬಕ್ಕೆಂದು ಹೊರಟಿದ್ದು, ಬೆಳಗ್ಗೆ 6.30ರ ಸುಮಾರಿಗೆ ದಟ್ಟವಾಗಿ ಮಂಜು ಆವರಿಸಿದ್ದರಿಂದ ಸವಾರನಿಗೆ ಹಂಪ್ ಗೋಚರಿಸದೆ ಬೈಕ್ ಸ್ಕಿಡ್ ಆಗಿದ್ದು, ಆಗ ರಸ್ತೆಗೆಸೆಯಲ್ಪಟ್ಟ ಸುಂದರಿಯವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ‌.

Kshetra Samachara

Kshetra Samachara

2 months ago

Cinque Terre

14.41 K

Cinque Terre

0