ಬೈಂದೂರು: ಆರಾಟೆ ಜಂಕ್ಷನ್ ಬಳಿ ಆಟೋರಿಕ್ಷಾ ಪಲ್ಟಿಯಾಗಿದ್ದು, ಚಾಲಕನಿಗೆ ಗಂಭೀರ ಗಾಯವಾಗಿದೆ.
ರಿಕ್ಷಾ ಚಾಲಕ ವೀರೇಂದ್ರ ಬಾವಿಕಟ್ಟೆ ಕುಂದಾಪುರದಿಂದ ಗಂಗೊಳ್ಳಿ ಕಡೆಗೆ ಸಂಚರಿಸುವಾಗ ರಸ್ತೆ ಡಿವೈಡರ್ ಗೆ ಆಟೋರಿಕ್ಷಾ ಬಡಿದು ರಸ್ತೆಯ ಎಡಬದಿಯಲ್ಲಿದ್ದ ಚರಂಡಿಗೆ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಜಾರಿ ಅವಘಡ ಸಂಭವಿಸಿದೆ.
ಈ ಸಂದರ್ಭ ರಿಕ್ಷಾ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗಂಗೊಳ್ಳಿ ಪೊಲೀಸ್ ಠಾಣೆ ಎಎಸ್‌ಐ ವೆಂಕಟೇಶ್ ಗೊಲ್ಲ ಧಾವಿಸಿ, ಪ್ರಕರಣ ದಾಖಲಿಸಿದ್ದಾರೆ.
Kshetra Samachara
30/01/2021 09:25 am