ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಕುಮ್ಕಿ ಜಾಗದಲ್ಲಿ ಮರಗಳ ಮಾರಣಹೋಮಕ್ಕೆ ಸಿದ್ಧತೆ - ಜೆಸಿಬಿ ಹಿಂದಕ್ಕೆ ಕಳುಹಿಸಿದ ಪರಿಸರವಾದಿಗಳು

ಮೂಡುಬಿದಿರೆ: ಕುಮ್ಕಿ ಜಾಗದಲ್ಲಿರುವ ಮರಗಳ ಮಾರಣಹೋಮಕ್ಕೆ ಸಿದ್ಧವಾಗಿದ್ದ ಜೆಸಿಬಿಯನ್ನು ಪರಿಸರವಾದಿಗಳು ತಡೆದಿದ್ದಾರೆ. ಆದ್ದರಿಂದ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂದೆ ಹೋಗಿದೆ.

ಈ ಘಟನೆ ನಡೆದಿದ್ದು, ಮೂಡುಬಿದಿರೆ ಸಮೀಪದ ಕಾಂತಾವರದ ಕಾಡಿನಲ್ಲಿ. ಈ ಕಾಡಿನಲ್ಲಿ ಮಂಗಳೂರಿನ ವನ ಚ್ಯಾರಿಟೇಬಲ್ ಟ್ರಸ್ಟ್ ನಿಂದ ಕಾಲೇಜು ವಿದ್ಯಾರ್ಥಿಗಳಿಗೆ ಕ್ಯಾಂಪ್ ನಡೆಯುತ್ತಿತ್ತು‌. ಈ ವೇಳೆ ಸ್ಥಳೀಯ ನಿವಾಸಿಯೊಬ್ಬರು ಕುಮ್ಕಿ ಜಾಗದ ಮರಗಳ ಮಾರಣಹೋಮಕ್ಕೆ ಜೆಸಿಬಿಯಿಂದ ಕಾರ್ಯಾಚರಣೆ ನಡೆಸುತ್ತಿದ್ದರು. ಇದನ್ನು ತಿಳಿದು ವನ ಚಾರಿಟೇಬಲ್ ಟ್ರಸ್ಟ್‌ನ ಸದಸ್ಯರು, ಪರಿಸರವಾದಿಗಳಾದ ಜೀತ್ ಮಿಲನ್ ರೋಚ್ ಹಾಗೂ ಭುವನ್ ದೇವಾಡಿಗ ಮರಗಳನ್ನು ಜೆಸಿಬಿಯಿಂದ ಬುಡಸಹಿತ ಉರುಳಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಕ್ಯಾರೇ ಎನ್ನದೆ ಜೆಸಿಬಿಯಿಂದ ಮರಗಳನ್ನು ಉರುಳಿಸುತ್ತಲೇ ಇದ್ದರು.

ಈ ವೇಳೆ ಕ್ಯಾಂಪ್ ನಲ್ಲಿರುವ ವಿದ್ಯಾರ್ಥಿಗಳು ಜೆಸಿಬಿಯನ್ನು ತಡೆಯಲೆತ್ನಿಸಿರುವ ಘಟನೆಯೂ ನಡೆದಿದೆ. ಇದೇ ವೇಳೆ ಕಾರ್ಕಳ ಅರಣ್ಯ ಇಲಾಖೆ ಹಾಗೂ ತಹಶೀಲ್ದಾರ್ ಮಾಹಿತಿ ನೀಡಲಾಗಿತ್ತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು, ತಹಶೀಲ್ದಾರ್ ಮರಗಳನ್ನು ಕಡಿದು ಉರುಳಿಸುವುದನ್ನು ತಡೆದಿದ್ದಾರೆ. ಅಲ್ಲದೆ ಈ ಬಗ್ಗೆ ಸೊಸೈಟಿ ಫಾರ್ ಫಾರೆಸ್ಟ್ ಎನ್ವಿರಾನ್‌ಮೆಂಟ್ ಕ್ಲೈಮೆಟ್ ಚೇಂಜ್‌ನಿಂದ ದೂರು ನೀಡಲಾಗಿದೆ.

Edited By : Shivu K
PublicNext

PublicNext

01/03/2024 10:43 pm

Cinque Terre

38.66 K

Cinque Terre

1