ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಕ್ಷಾ ನಾಯಕ್ ಸಾವು ಪ್ರಕರಣ: ಆರೋಪಿ ವಶಕ್ಕೆ

ಉಡುಪಿ: ವಿದ್ಯಾರ್ಥಿನಿ ರಕ್ಷಾ ನಾಯಕ್ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಮೊಗವೀರ ಎಂಬ ಆರೋಪಿಯನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ಉಡುಪಿ ನಗರ ಪೊಲೀಸ್ ಠಾಣೆ ಸಿಬ್ಬಂದಿಗಳು, ಆರೋಪಿ ಪ್ರಶಾಂತ್ ಮೊಗವೀರನನ್ನು ಕಳೆದ ಒಂದು ವಾರದಿಂದ ವಿಚಾರಣೆ ನಡೆಸಿ ವಾಪಸ್ ಕಳುಹಿಸುತ್ತಿದ್ದರು. ಈ ನಡುವೆ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ತಮ್ಮ ಕಸ್ಟಡಿಗೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು‌.

ಅಕ್ಟೋಬರ್ 24 ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ರಕ್ಷಿತಾಳನ್ನು ಆರೋಪಿ ಪ್ರಶಾಂತ್ ಗಾಂಧಿ ಆಸ್ಪತ್ರೆಗೆ ಕರೆತಂದಿದ್ದರು. ಸ್ವಲ್ಪ ಸಮಯದ ನಂತರ ಆತ ಆಸ್ಪತ್ರೆಯಿಂದ ಕಣ್ಮರೆಯಾಗಿ ನಾಪತ್ತೆಯಾಗಿದ್ದ. ಇದಲ್ಲದೆ, ಆತನ ಫೋನ್ ಸ್ವಿಚ್ ಆಫ್ ಆಗಿತ್ತು‌. ಕಳೆದ ಒಂದು ವಾರದಿಂದ ನಿರಂತರವಾಗಿ ವಿಚಾರಣೆ ನಡೆಸಿದ ಪೊಲೀಸರು ಆತನನ್ನು ಮೂರು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

02/11/2020 03:20 pm

Cinque Terre

28.01 K

Cinque Terre

7

ಸಂಬಂಧಿತ ಸುದ್ದಿ