ಉಡುಪಿ: ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಯುವಕನೊಬ್ಬ ಆಸ್ಪತ್ರೆಗೆ ಬಿಟ್ಟು ಪರಾರಿಯಾಗಿದ ಬಳಿಕ ಆ ಯುವತಿ ಕೆಲವೇ ಹೊತ್ತಿನಲ್ಲಿ ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ಇದೀಗ ಒಂದೊಂದೇ ಸ್ಪೋಟಕ ಮಾಹಿತಿಗಳು ಹೊರಬರತೊಡಗಿವೆ.
ಮುಖ್ಯವಾಗಿ ಆ ಯುವತಿಯನ್ನು ಬಿಟ್ಟು ಹೋದ ಪ್ರಶಾಂತ್ ಕುಂದರ್ ಓರ್ವ ವಿವಾಹಿತನಾಗಿದ್ದಾನೆ.ಆತ ಮತ್ತು ರಕ್ಷಿತಾ ನಾಯಕ್ ಉಡುಪಿಯಲ್ಲಿ ಬಾಡಿಗೆ ಮನೆ ಕೂಡ ಮಾಡಿಕೊಂಡ ಸಂಗತಿ ಇದೀಗ ಬಯಲಾಗತೊಡಗಿವೆ.
ಮಂಗಳೂರಿನಲ್ಲಿ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೆತ್ತವರನ್ನು ನಂಬಿಸಿದ್ದ ರಕ್ಷಿತಾ ನಾಯಕ್ ,ಮಣಿಪಾಲದ ಕಾಲೇಜೊಂದರಲ್ಲಿ ಬಿಕಾಂ ಅಂತಿಮ ಸೆಮಿಸ್ಟರ್ ಓದುತ್ತಿದ್ದಳು.ಕೊರೋನಾ ಕಾರಣದಿಂದ ಕಾಲೇಜಿನ ತರಗತಿಗಳು ಪ್ರಾರಂಭಗೊಂಡಿಲ್ಲ.ಹೀಗಾಗಿ ಹಿರಿಯಡ್ಕದಲ್ಲಿದ್ದ ಮನೆಯವರೂ ಕೂಡ ಮಗಳ ಮಾತನ್ನು ನಂಬಿದ್ದರು.
ಇನ್ನು ಪ್ರಶಾಂತ್ ಕುಂದರ್ ವಿವಾಹಿತನಾಗಿದ್ದು ಫರ್ನಿಚರ್ ,ಅಂಗಡಿಯಲ್ಲ ಕೆಲಸ ಮಾಡಿಕೊಂಡಿದ್ದ.ಇದೀಗ ಪೊಲೀಸರು ಕುಂದರ್ ಗಾಗಿ ಬಲೆ ಬೀಸಿದ್ದಾರೆ.ಆಸ್ಪತ್ರೆಯಲ್ಲಿ ಮೃತಪಟ್ಟ ಯುವತಿಯ ಕುತ್ತಿಗೆ ಭಾಗದಲ್ಲಿ ಗಾಯದ ಗುರುತಿದ್ದು ಈಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.ಇದಕ್ಕೆ ಪುಷ್ಠಿ ನೀಡುವಂತೆ ಯುವತಿ ತನ್ನ ಕೊನೆಯ ಕರೆಯಲ್ಲಿ ಕುಂದರ್ ಜೊತೆ ,ನಾನು ತುಂಬಾ ಕುಡಿದಿದ್ದೇನೆ ,ಸಾಯುತ್ತೇನೆ ಎಂದು ಹೇಳಿದ ಸಂಭಾಷಣೆ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗುತ್ತಿದೆ.
ಏನೇ ಇರಲಿ,ಯುವತಿಯ ನಿಗೂಢ ಸಾವು ಎಲ್ಲ ಪೋಷಕರಿಗೆ ಒಂದು ಎಚ್ಚರಿಕೆ ಗಂಟೆ. ತಮ್ಮ ಹರೆಯದ ಮಕ್ಕಳು ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ಯಾರ ಜೊತೆ ಸಂಪರ್ಕ ಹೊಂದಿದ್ದಾಳೆ, ಅವರ ಗೆಳೆಯರು ಯಾರು? ಅವರ ಚಲನವಲನ ಹೇಗಿದೆ ಇತ್ಯಾದಿ ಪೋಷಕರು ಗಮನಿಸದೇ,ಬರೀ ಅವರ ಮಾತನ್ನಷ್ಟೇ ಸತ್ಯ ಎಂದು ನಂಬಿದರೆ ಏನಾಗುತ್ತದೆ ಎಂಬುದಕ್ಕೆ ಈ ಸಾವು ಒಂದು ಉದಾಹರಣೆ.
ಮುಖ್ಯವಾಗಿ ಮಣಿಪಾಲದಲ್ಲಿ ಸಾವಿರಾರು ವಿದ್ಯಾರ್ಥಿಗಳು ಅದರಲ್ಲೂ ಪರರಾಜ್ಯದ ಪರದೇಶದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹೆಚ್ಚಿನವರು ಶ್ರೀಮಂತರ ಮಕ್ಕಳು. ಅವರ ಥಳುಕು ಬಳುಕಿನ ಜೀವನವನ್ನು ನೋಡಿದ ಸ್ಥಳೀಯ ವಿದ್ಯಾರ್ಥಿಗಳು ಅವರನ್ನು ಅನುಕರಣೆ ಮಾಡಲು ಹೋಗಿ ತಮ್ಮ ಗೋರಿಯನ್ನು ತಾವೇ ತೋಡಿಕೊಳ್ಳುತ್ತಾರೆ.
Kshetra Samachara
26/10/2020 01:36 pm