ಮಂಗಳೂರು: ಖಾಸಗಿ ಸಿಟಿ ಬಸ್ ಮೇಲೆ ಕಲ್ಲೂ ತೂರಾಟ ನಡೆಸಿದ ಘಟನೆ ಮಂಗಳೂರು ಹೊರವಲಯ ದೇರಳಕಟ್ಟೆಯಲ್ಲಿ ನಡೆದಿದೆ,ದೇರಳಕಟ್ಟೆ ಜಲಲ್ ಭಾಗ್ ಬಸ್ ನಿಲ್ದಾಣ ಬಳಿ ಬೈಕ್ ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಖಾಸಗಿ ಸಿಟಿ ಬಸ್ ನ್ನು ಅಡ್ಡಗಟ್ಟಿ ಡ್ರೈವರ್ ಮೇಲೆ ಕಲ್ಲೆಸೆದು ಬಸ್ ನ ಗಾಜು ಪುಡಿಗೈದು ಪರಾರಿಯಾಗಿದ್ದಾರೆ.ಈ ವೇಳೆ ಸ್ಥಳದಲ್ಲಿ ಕೆಲವು ಹೊತ್ತು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು ಘಟನೆ ಬಗ್ಗೆ ಬಸ್ ನೌಕರರ ಸಂಘದ ಪದಾಧಿಕಾರಿಗಳು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿದ್ದಾರೆ..
Kshetra Samachara
25/10/2020 10:45 am