ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪ್ರೇತ ಉಚ್ಚಾಟನೆ ವೇಳೆ ಯುವಕನಿಗೆ ದೌರ್ಜನ್ಯ

ಮಂಗಳೂರು: ಮೂಢನಂಬಿಕೆಗೆ ಪ್ರಚೋದನೆ ನೀಡುವ ರೀತಿಯಲ್ಲಿ ಪ್ರೇತ ಉಚ್ಚಾಟನೆಯ ಹೆಸರಿನಲ್ಲಿ ಯುವಕನೊಬ್ಬನ ಮೇಲೆ ಅಮಾನವೀಯವಾಗಿ ದೌರ್ಜನ್ಯ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬ್ರಹ್ಮರಾಕ್ಷಸನೆಂದು ಹೇಳಿ ಯುವಕನ ಮೇಲೆ ಆವೇಶ ಬಂದಿದ್ದು, ಇದೇ ವೇಳೆ ಮಂತ್ರವಾದಿಯೆಂದು ಹೇಳಿಕೊಂಡು ಬಂದ ವ್ಯಕ್ತಿ ಉಚ್ಚಾಟನೆ ಮಾಡುವ ದೃಶ್ಯ ಇದರಲ್ಲಿದೆ. ಆವಾಗ ಆವೇಶ ಭರಿತ ಯುವಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಬಳಿಕ ಯುವಕನ ಸಂಬಂಧಿಕರ ಮೂಲಕ ಬೆತ್ತದಿಂದ ಯುವಕನಿಗೆ ಹಲ್ಲೆ ನಡೆಸುವ, ಕರ್ಪೂರವನ್ನು ಕೈಗೆ ಇಟ್ಟು ಉರಿಸುವ ದೃಶ್ಯ ಇದೆ. ಈ ಮಧ್ಯೆ ಸಹೋದರರು ಹೊ-ಕೈ ನಡೆಸುವ ದೃಶ್ಯಗಳೂ ವಿಡಿಯೋದಲ್ಲಿ ಸೆರೆಯಾಗಿದೆ. ತುಳು ಭಾಷೆಯಲ್ಲಿ ಸಂಭಾಷಣೆ ಇದೆ.

Edited By : Nagesh Gaonkar
Kshetra Samachara

Kshetra Samachara

21/10/2020 01:04 pm

Cinque Terre

51.33 K

Cinque Terre

1

ಸಂಬಂಧಿತ ಸುದ್ದಿ