ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪುಟ್ಟ ಕಂದಮ್ಮನನ್ನ ಕೊಲೆಗೈದು ತಾಯಿ ಆತ್ಮಹತ್ಯೆಗೆ ಶರಣು

ಮಂಗಳೂರು: ಮಹಿಳೆಯೊಬ್ಬರು ಹತ್ತು ತಿಂಗಳ ಪುತ್ರಿಗೆ ನಿದ್ದೆ ಮಾತ್ರೆ ನೀಡಿ ಕೊಲೆಗೈದು ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಶಕ್ತಿನಗರದಲ್ಲಿ ನಡೆದಿದೆ.

ಶಕ್ತಿನಗರದ ಕೆ.ಎಚ್‌.ಬಿ. ಕಾಲೊನಿಯ ಪ್ರಮೀಳಾ (38) ಆತ್ಮಹತ್ಯೆಗೆ ಶರಣಾದ ಮಹಿಳೆ. ಪ್ರಮೀಳಾ ತನ್ನ ತಾಯಿ ಶಶಿಕಲಾ (60), ಪುತ್ರ ಆಶಿಸ್ (15) ಹಾಗೂ ೧೦ ತಿಂಗಳ ಮಗಳಿಗೆ ನಿದ್ದೆ ಮಾತ್ರೆಗಳನ್ನು ನೀಡಿದ್ದಳು. ಆದರೆ ಶಶಿಕಲಾ ಹಾಗೂ ಆಶಿಸ್ ಪ್ರಾಣಾಪಾಯದಿಂದ ಪಾರಾಗಿದ್ದು, ಪುತ್ರಿ ಸಾವನ್ನಪ್ಪಿದ್ದಾಳೆ.

ಪ್ರಮೀಳಾ ಪತಿ ರವಿ ಶೆಟ್ಟಿ ಕೊಟ್ಟಾರದ ಗ್ಯಾರೇಜೊಂದರಲ್ಲಿ ಕೆಲಸ ಮಾಡುತ್ತಿದ್ದು, ಶನಿವಾರವೂ ಕೆಲಸಕ್ಕೆ ಹೋಗಿದ್ದರು. 11 ಗಂಟೆಯ ಚಹಾದೊಂದಿಗೆ ಪ್ರಮೀಳಾ ಮನೆಯಲ್ಲಿದ್ದ ಎಲ್ಲರಿಗೂ ನಿದ್ರೆ ಮಾತ್ರೆ ನೀಡಿದ್ದರು. ಅವರೆಲ್ಲರೂ ನಿದ್ರೆಗೆ ಜಾರಿದಾಗ ಮಾಳಿಗೆಯ ಕೊಠಡಿಗೆ ತೆರಳಿ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾರೆ. ಆದರೆ ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ.

Edited By : Vijay Kumar
Kshetra Samachara

Kshetra Samachara

11/10/2020 07:45 am

Cinque Terre

35.75 K

Cinque Terre

3

ಸಂಬಂಧಿತ ಸುದ್ದಿ