ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಶ್ರದ್ಧಾ ಭಕ್ತಿಯಿಂದ ತಂಡ ಕಾಂತಾರ ಸಿನಿಮಾ‌ ಮಾಡಿದೆ: ದೈವ ನರ್ತಕ ಮುಖೇಶ್

ಮಂಗಳೂರು: ದೈವಾರಾಧನೆಯ ಕಥೆಯುಳ್ಳ ಸಿನಿಮಾ, ನಾಟಕ ಇತ್ಯಾದಿ ಮಾಡುವ ಸಂದರ್ಭದಲ್ಲಿ ಬಹಳ ಜಾಗರೂಕತೆಯಿಂದ ಇರಬೇಕಾಗುತ್ತದೆ. ಸ್ವಲ್ಪ ಎಡವಟ್ಟಾದರೂ ಇಡೀ ಸಿನಿಮಾ ತಂಡ ಭಾರೀ ಟೀಕೆಗೆ, ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ‌. ಕಾಂತಾರ ಸಿನಿಮಾವೂ ಕಾಡು, ಪ್ರಕೃತಿ-ಮನುಷ್ಯ ಸಂಬಂಧ, ಕರಾವಳಿಯ ದೈವಾರಾಧನೆಯ ಹಿನ್ನೆಲೆ ಇರುವ ಸಿನಿಮಾ. ಈ ಸಿನಿಮಾದಲ್ಲಿ ದೈವಾರಾಧನೆಯ ವಿಚಾರದಲ್ಲಿ ಸಿನಿಮಾ ತಂಡಕ್ಕೆ ಸಲಹೆ - ಸಹಕಾರ ನೀಡಿರುವ ದೈವ ನರ್ತಕ ಮುಖೇಶ್ ಅವರು ಕಾಂತಾರ ಸಿನಿಮಾ ಹಾಗೂ ಸಿನಿಮಾ ತಂಡದ ಬಗ್ಗೆ ತಮ್ಮ ಅಭಿಪ್ರಾಯವನ್ನು ಈ ರೀತಿಯಲ್ಲಿ ಹಂಚಿಕೊಂಡರು.

ಕಾಂತಾರ ಆತ್ಮಕ್ಕೆ ಮುಟ್ಟುವ ಕಥೆ. ದೈವಾರಾಧನೆಯ ಹಿನ್ನೆಲೆಯುಳ್ಳ ಈ ಸಿನಿಮಾವನ್ನು ಇಡೀ ತಂಡವು ಶ್ರದ್ಧಾ ಭಕ್ತಿಯಿಂದ ಕಾಂತಾರ ಸಿನಿಮಾವನ್ನು ಮಾಡಿದೆ‌. ಮದ್ಯ-ಮಾಂಸವನ್ನು ತ್ಯಜಿಸಿ ಈ ಸಿನಿಮಾ ಮಾಡಲಾಗಿದೆ. ಅಲ್ಲದೆ ಸಿನಿಮಾದಲ್ಲಿ ಕೋಲದ ಶೂಟಿಂಗ್ ನಡೆಯುವ ಸ್ಥಳದಲ್ಲಿ ಚಪ್ಪಲಿಯನ್ನು ಹಾಕದೆ ಎಲ್ಲರೂ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು.

Edited By :
PublicNext

PublicNext

04/10/2022 04:24 pm

Cinque Terre

23.92 K

Cinque Terre

0

ಸಂಬಂಧಿತ ಸುದ್ದಿ