ಮಂಗಳೂರು: ಕನ್ನಡದ ಹೊಸ ಸಿನಿಮಾ 'ಚೇಸ್' ಜೂನ್‌ನಲ್ಲಿ ರಿಲೀಸ್ ಆಗಲಿದೆ. ಸಿಂಪ್ಲಿಫನ್ ಮೀಡಿಯಾ ನೆಟ್‌ವರ್ಕ್ ಪ್ರೈ.ಲಿ ಬ್ಯಾನರ್‌ನಲ್ಲಿ ಮಂಗಳೂರಿನ ಪ್ರತಿಭಾವಂತರು ತಯಾರಿಸಿದ ಚೇಸ್ ಕನ್ನಡ ಸಿನಿಮಾ ಜೂನ್ ತಿಂಗಳಲ್ಲಿ ತೆರೆ ಕಾಣಲಿದೆ.
ಸಿನಿಮಾಕ್ಕೆ ಒಂದೇ ಹಂತದ ಚಿತ್ರೀಕರಣ ನಡೆಸಲಾಗಿದೆ. ವಿಲೋಕ್ ಶೆಟ್ಟಿ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಮನೋಹರ ಸುವರ್ಣ, ಪ್ರಶಾಂತ್ ಶೆಟ್ಟಿ, ಪ್ರದೀಪ್ ಶೆಟ್ಟಿ ಸಿನಿಮಾದ ನಿರ್ಮಾಪಕರಾಗಿದ್ದಾರೆ. ಈ ಚಿತ್ರದ ತಾರಾಗಣದಲ್ಲಿ ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು (ಅವಿನಾಶ್ ಎಸ್ ದಿವಾಕರ್), ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ, ಅರವಿಂದ ಬೋಳಾರ್, ಶ್ವೇತಾ ಸಂಜೀವುಲು, ರಹಮಾನ್ ಹಸನ್, ವೀಣಾ ಸುಂದರ್, ಸುಧಾ ಬೆಳವಡಿ, ಉಷಾ ಭಂಡಾರಿ, ಸುಂದರ್, ಸತೀಶ ಸಿದ್ದಾರ್ಥ ಮಾಧ್ಯಮಿಕ, ಪ್ರಿಯಾ ಷಟಮರ್ಶನ್ ಇದ್ದಾರೆ.
ಈ ಚಿತ್ರದ ಪ್ರಮುಖ ಪಾತ್ರಗಳು ಒಂದು ರಾತ್ರಿ ಎಲ್ಲೆಲ್ಲೋ ಇದ್ದು ಅನಿರೀಕ್ಷಿತವಾಗಿ ನಡೆಯುವ ಘಟನೆಗಳಿಂದ ಒಬ್ಬರನ್ನೊಬ್ಬರು ಭೇಟಿಯಾಗಬೇಕಾಗಿ ಬಂದಾಗ ಏನಾಗುತ್ತದೆ, ಆ ಘಟನೆಗಳೇನು? ಈ ಪಾತ್ರಗಳು ಒಂದು ಕೇಸನ್ನ ಅದಕ್ಕೆ ಕನೆಕ್ಟ್ ಆಗಿರೋ ಸುಳಿವುಗಳನ್ನ ಚೇಸ್ ಮಾಡ್ತಾ ಹೋದಾಗ ಏನೆಲ್ಲಾ ಘಟನೆಗಳು ನಡೆಯುತ್ತೆ ಎಂಬುದಾಗಿದೆ. ಪ್ರತಿಯೊಂದು ಕ್ರೈಂ ನಡೆದಾಗ ಅದರ ಹಿಂದಿರೋ ವ್ಯಕ್ತಿಗಳನ್ನ ಚೇಸ್ ಮಾಡಿದಾಗ ಅದಷ್ಟು ಮಿಸ್ಟರಿಗಳು ಹೊರಗೆ ಬರುತ್ತೆ.. ಅದು ಕಾಮನ್ ವ್ಯಕ್ತಿಗಳ ಮೇಲೆ ಏನೆಲ್ಲ ಪರಿಣಾಮ ಬೀರಬಹುದು ಅನ್ನೋದನ್ನ ಕಮರ್ಷಿಯಲ್ ವೇನಲ್ಲಿ ತೋರಿಸೋ ಪ್ರಯತ್ನ ಚೇಸ್ ಸಿನಿಮಾ ಆಗಿದೆ.
PublicNext
07/05/2022 07:42 pm