ಉಡುಪಿ: ಕೃಷ್ಣನೂರು ಉಡುಪಿಯಲ್ಲೂ ಜೇಮ್ಸ್ ಜಾತ್ರೆ ಜೋರಾಗಿದೆ.. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹುಟ್ಟು ಹಬ್ಬ ಜೊತೆಗೆ ಜೇಮ್ಸ್ ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಂಡಿದ್ದು, ಉಡುಪಿಯಲ್ಲಿ ಅಪ್ಪು ಅಭಿಮಾನಿಗಳು ಅಪ್ಪು ಪೋಟೋಗೆ ಹೂ ಹಾರ ಹಾಕಿ ,ಕೇಕ್ ಕತ್ತರಿಸಿ ಸಂಭ್ರಮಿಸಿದರು. ಬೆಳಗ್ಗಿನಿಂದಲೇ ಉಡುಪಿಯ ಅಲಂಕಾರ್ ಚಿತ್ರಮಂದಿರದಲ್ಲಿ ನೆರೆದಿದ್ದ ಅಭಿಮಾನಿಗಳು ಜೇಮ್ಸ್ ಚಿತ್ರದ ಟಿಕೇಟ್ ಖರೀದಿಗೆ ಮುಗಿಬಿದ್ದರು. ಜೇಮ್ಸ್ ಚಿತ್ರಕ್ಕಾಗಿ ಚಿತ್ರಮಂದಿರದವರು ನಿಗದಿಗಿಂತ ಒಂದು ಗಂಟೆ ಮುಂಚಿತವಾಗಿ ಫಸ್ಟ್ ಶೋ ಆರಂಭಿಸಿದರು.
Kshetra Samachara
17/03/2022 04:46 pm