ಮಣಿಪಾಲ: ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಜನ್ಮಶತಮಾನೋತ್ಸವ ನೆನಪಿಗಾಗಿ ಮಾಹೆ ಗಾಂಧಿಯನ್ ಸೆಂಟರ್, ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸ್ ವತಿಯಿಂದ ಮಾ. 17 ರಿಂದ 19 ರ ವರೆಗೆ 'ರೇ' ಚಲನಚಿತ್ರೋತ್ಸವ ಆಯೋಜಿಸಲಾಗಿದೆ ಎಂದು ಜಿಸಿಪಿಎಎಸ್ - ನಿರ್ದೇಶಕ ಪ್ರೊ. ವರದೇಶ್ ಹಿರೇಗಂಗೆ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾ. 17 ರಂದು ಸಂಜೆ 4 ಗಂಟೆಗೆ ಚಲನಚಿತ್ರೋತ್ಸವ ಉದ್ಘಾಟಿ ಸಲಿದ್ದಾರೆ. ವೀಕ್ಷಣೆಗೆ ಶುಲ್ಕವಿಲ್ಲ. ಮುಕ್ತ ಅವಕಾಶವಿದೆ. ಉದ್ಘಾಟನಾ ಕಾರ್ಯಕ್ರಮ ಮತ್ತು ಎಲ್ಲ ಚಿತ್ರ ಪ್ರದರ್ಶನಗಳು ಮಾಹೆ ತಾರಾಲಯ ಸಂಕೀರ್ಣದ ಸಭಾಂಗಣದಲ್ಲಿ ಜರುಗಲಿವೆ ಎಂದರು.
ಮಾ.18 ರಂದು ರೇ ಅವರ ರವೀಂದ್ರನಾಥ್ ಸಾಕ್ಷ್ಯಚಿತ್ರ ಪ್ರದರ್ಶನ ಇದೆ. ಬಳಿಕ ಗಿರೀಶ್ ಕಾಸರವಳ್ಳಿ ಅವರೊಂದಿಗೆ ಸಂವಾದ ನಡೆಯಲಿದೆ. ಮಧ್ಯಾಹ್ನ 2 ಕ್ಕೆ ಕಾಂಚನಜುಂಗ,ಸಂಜೆ 4ಕ್ಕೆ ಮಹಾನಗರ, ರಾತ್ರಿ 7ಕ್ಕೆ ಘರೆ-ಬೈರೆ ಚಿತ್ರ ಪ್ರದರ್ಶನ ನಡೆಯಲಿದೆ. ಮಾ.19 ರಂದು ಬೆಳಗ್ಗೆ 9.15ಕ್ಕೆ ಕಾಸರವಳ್ಳಿಯವರ 'ಜಾಗತಿಕ ಚಲನಚಿತ್ರಗಳು ಒಂದು ನೋಟ' ಕುರಿತು ಉಪನ್ಯಾಸ ಇರುತ್ತದೆ. ಮಾಹೆ ಕಾರ್ಯಕಾರಿ ಉಪಾಧ್ಯಕ್ಷ ಡಾ.ವಿನೋದ್ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
Kshetra Samachara
16/03/2022 06:03 pm