ಅಲೆವೂರು: ಖ್ಯಾತ ನಟ, ನಿರ್ದೇಶಕ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಹಾಗೂ ಗರುಡ ಗಮನ ವೃಷಭ ವಾಹನ ಖ್ಯಾತಿಯ ರಾಜ್ ಬಿ ಶೆಟ್ಟಿ ಅವರು ವಾಲಿಬಾಲ್ ಆಟ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸದ್ಯ ರಕ್ಷಿತ್ ಶೆಟ್ಟಿ ತಮ್ಮ ಹುಟ್ಟೂರಾದ ಉಡುಪಿಯ ಅಲೆವೂರಿನ ಮನೆಯಲ್ಲಿದ್ದು, ಬಿಡುವಿನ ವೇಳೆ ಅಪ್ತಗೆಳೆಯ ನಟ ರಾಜ್ ಬಿ ಶೆಟ್ಟಿ ಹಾಗೂ ಸ್ನೇಹಿತರ ಜೊತೆ ವಾಲಿಬಾಲ್ ಆಡುತ್ತಿದ್ದರು. ಈ ವೇಳೆ ಜೊತೆಗೆ ಇದ್ದ ಸ್ನೇಹಿತರೊಬ್ಬರು, ರಕ್ಷಿತ್ ಶೆಟ್ಟಿ ಅವರು ವಾಲಿಬಾಲ್ ಆಟದಲ್ಲಿ ಕಟ್ ಹೊಡೆಯುವುದನ್ನು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಅಭಿಮಾನಿಗಳು ಮೆಚ್ಚಿನ ನಟನ ಆಟ ಕಂಡು ಸಂಸತಗೊಂಡಿದ್ದಾರೆ.
PublicNext
19/01/2022 05:34 pm