ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ ಬೀಚ್ ನಲ್ಲಿ ಚಂದು ನಿವಿ ನ್ಯೂ ಇಯರ್ ಸೆಲೆಬ್ರೇಷನ್ !

ಮಲ್ಪೆ: ನೂತನ ವರ್ಷದ ಆಗಮನಕ್ಕಾಗಿ ಸೋ ಕ್ಯೂಟ್ ಜೋಡಿ ರ‍್ಯಾಪರ್ ಚಂದನ್ ಶೆಟ್ಟಿ ನಿವೇದಿತಾ ಗೌಡ ದಂಪತಿ ಮಲ್ಪೆ ಬೀಚ್ ನಲ್ಲಿ ಎಂಜಾಯ್ ಮಾಡಿದ್ದಾರೆ.

ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಮಲ್ಪೆ ಕಡಲ ಕಿನಾರೆಯಲ್ಲಿ ಸಾಕಷ್ಟು ಜನ ಎಂಟ್ರಿ ಕೊಟ್ಟಿದ್ದರು. ಇನ್ನು ಹೊಸ ವರ್ಷದ ಸಂಭ್ರಮಕ್ಕಾಗಿಯೇ ಕಡಲ ಕಿನಾರೆಯನ್ನು ಆಕರ್ಷಕ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ರಾತ್ರಿ ಹತ್ತರ ಬಳಿಕ ಕರ್ಪ್ಯೂ ಇರುವ ಕಾರಣ ಡಿ.31ರ ಸಂಜೆಯಿಂದಲೇ ಜನ ಮಲ್ಪೆಯತ್ತ ದೌಡಾಯಿಸಿದ್ದರು. ಇದೇ ವೇಳೆ ರ‍್ಯಾಪರ್ ಚಂದನ್ ಶೆಟ್ಟಿ - ನಿವೇದಿತಾ ಗೌಡ ಜೋಡಿ ಉಡುಪಿಗೆ ಆಗಮಿಸಿದ್ದು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.

ಮಲ್ಪೆ ಕಡಲಕಿನಾರೆಯಲ್ಲಿ ಚಂದನ್ ನಿವೇದಿತಾ 2021 ಕೊನೆ ದಿನವನ್ನು ಎಂಜಾಯ್ ಮಾಡುತ್ತಿದ್ದು, ಇಷ್ಟದ ಸೀ ಪುಡ್ ಸವಿದರು. ನನಗೆ ಉಡುಪಿಯ ಮಲ್ಪೆ ಕಡಲ ಕಿನಾರೆ ಅಂದರೆ ಇಷ್ಟ. ಹೀಗಾಗಿ 2021 ನ್ನು ಬೀಳ್ಕೊಟ್ಟು 2022 ನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಪತ್ನಿ ಜೊತೆ ಉಡುಪಿಗೆ ಆಗಮಿಸಿದ್ದೇನೆ ಎಂದು ಚಂದು ಸಂತಸ ಹಂಚಿಕೊಂಡರು.

Edited By : Manjunath H D
PublicNext

PublicNext

01/01/2022 10:40 am

Cinque Terre

37.26 K

Cinque Terre

5

ಸಂಬಂಧಿತ ಸುದ್ದಿ