ವರದಿ: ರಹೀಂ
ಉಡುಪಿ: ಗರುಡ ಗಮನ ವೃಷಭ ವಾಹನ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಚಿತ್ರ ತಂಡ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದೆ. ಉಡುಪಿ ಜಿಲ್ಲೆಗೆ ಬಂದ ತಂಡ ಕಲ್ಪನಾ ಥಿಯೇಟರ್ ಗೆ ಭೇಟಿ ಕೊಟ್ಟಿತು.
ತಂಡವು ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಜೊತೆ ಕೂತು ಸಿನೆಮಾದ ಕ್ಲೈಮ್ಯಾಕ್ಸ್ ವೀಕ್ಷಣೆ ಮಾಡಿತು. ಸಿನೆಮಾ ಮುಗಿದ ನಂತರ ನೂರಾರು ಪ್ರೇಕ್ಷಕರು ನಟ ನಿರ್ದೇಶಕ ರಾಜ್ ಬಿ. ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ಚಿತ್ರದ ಬಗ್ಗೆ ಪ್ರೇಕ್ಷಕರು ಡಿಸ್ಕಸ್ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಟ ರಿಷಬ್ ಶೆಟ್ಟಿ, ಸೆಕೆಂಡ್ ವೀಕ್ ನಲ್ಲಿ ಥಿಯೇಟರುಗಳ ಸಂಖ್ಯೆ ಜಾಸ್ತಿಯಾಗಿದೆ. ಕರ್ನಾಟಕ ಮಾತ್ರವಲ್ಲ, ಹೊರ ರಾಜ್ಯಗಳಲ್ಲೂ ವಿತರಕರು ಚಿತ್ರ ರಿಲೀಸ್ ಮಾಡುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ಹೌಸ್ ಫುಲ್ ಪ್ರದರ್ಶನ ಆಗ್ತಾ ಇದೆ. ಇದು ಗ್ರೇಟ್ ಸಕ್ಸಸ್ . ಬೆಂಗಳೂರು ಮೈಸೂರು ಮತ್ತು ಕರಾವಳಿಯಲ್ಲಿ ಹೌಸ್ ಫುಲ್ ಚಿತ್ರ ಪ್ರದರ್ಶನ ಆಗ್ತಾ ಇರುವುದು ಬಹಳ ಖುಷಿಯಾಗುತ್ತಿದೆ. ಜನ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.ವಿಭಿನ್ನ ರೀತಿಯ ಚಿತ್ರವನ್ನು ಇಷ್ಟಪಡುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದರು.
ಬೇರೆ ಬೇರೆ ಭಾಷೆಗಳಿಂದ ಡಬ್ಬಿಂಗ್ ರೈಟ್ಸ್ ಗೆ ಬೇಡಿಕೆ ಬರುತ್ತಿದೆ. ಮುಂದಿನ ವಾರದಲ್ಲಿ ಈ ಬಗ್ಗೆ ಮಾತುಕತೆ ನಡೆಯಲಿದೆ. ನಾವು ಬಹಳಷ್ಟು ಕಷ್ಟ ಪಟ್ಟು ಚಿತ್ರವನ್ನು ತಯಾರು ಮಾಡಿದ್ದೇವೆ. ಕೆಲ ವ್ಯಕ್ತಿಗಳು ಮೊಬೈಲ್ ನಲ್ಲಿ ಶೂಟಿಂಗ್ ಮಾಡಿ ಪೈರಸಿ ಮಾಡಿ ಮಾಡಿಬಿಟ್ಟಿದ್ದಾರೆ. ಚಿತ್ರ ಬಿಡುಗಡೆಗೆ ಮುನ್ನವೇ ನಾವು ಕಾನೂನು ರೀತಿಯಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ಪೈರಸಿ ಚಿತ್ರಗಳನ್ನು ನೋಡಬೇಡಿ. ಥಿಯೇಟರ್ ಗೆ ಬಂದು ಶ್ರಮಕ್ಕೆ ಬೆಂಬಲ ಕೊಡಿ ಎಂದು ನಿರ್ದೇಶಕ ನಟ ರಾಜ್ ಬಿ ಶೆಟ್ಟಿ ಮನವಿ ಮಾಡಿದರು.
ಚಿತ್ರತಂಡ ಮಣಿಪಾಲ ಮತ್ತು ಕುಂದಾಪುರದ ಥಿಯೇಟರುಗಳಿಗೂ ಭೇಟಿಕೊಟ್ಟಿತು. ಚಿತ್ರದ ನಿರ್ಮಾಪಕ ರವಿ ರೈ ಬಿ.ವಿ ಕಳಸ - ವಚನ್ ಶೆಟ್ಟಿ, ಕ್ಯಾಮೆರಾ ಮೆನ್ ಮತ್ತು ಎಡಿಟರ್ ಪ್ರವೀಣ್ ಶ್ರೀಯಾನ್ ಚಿತ್ರದ ಕಲಾವಿದರು ಮತ್ತು ತಾಂತ್ರಿಕ ವರ್ಗ ಈ ಸಂದರ್ಭದಲ್ಲಿ ಜೊತೆಗಿದ್ದರು.
Kshetra Samachara
27/11/2021 07:12 pm