ಉಡುಪಿ: ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಪ್ರೇಮ ಅವರು ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣನ ದರ್ಶನ ಪಡೆದರು. ಕನಕನ ಕಿಂಡಿ ಮೂಲಕ ಗೋಪಾಲನ ದರ್ಶನ ಪಡೆದ ಪ್ರೇಮ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಬಳಿಕ ಪರ್ಯಾಯ ಅದಮಾರು ಈಶ ಪ್ರಿಯ ಸ್ವಾಮೀಜಿಯವರನ್ನು ಭೇಟಿ ಮಾಡಿ, ಶ್ರೀಗಳ ಆಶೀರ್ವಾದ ಪಡೆದು ಮಂತ್ರಾಕ್ಷತೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶ್ರೀಕೃಷ್ಣ ಮಠದ ವತಿಯಿಂದ ನಟಿ ಪ್ರೇಮ ಅವರನ್ನು ಗೌರವಿಸಲಾಯಿತು.
Kshetra Samachara
10/11/2021 02:16 pm