ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ' ಈ ಮಾಸದ ನಗು...' ಸದಾ ಸ್ಫೂರ್ತಿ; ರಂಗೋಲಿಯಲ್ಲಿ ಪುನೀತ್ ಗೆ ಕಲಾಂಜಲಿ

ಬೆಳ್ತಂಗಡಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಹಲೋಕ ತ್ಯಜಿಸಿ, ವಾರ ಕಳೆದಿದೆ. ಆದರೆ, ಅವರ ಅಭಿಮಾನಿಗಳಿಗೆ ಅಪ್ಪು ಇನ್ನಿಲ್ಲ ಎಂಬ ಕಹಿ ಸತ್ಯ ಅರಗಿಸಿಕೊಳ್ಳಲು ಇನ್ನೂ ಸಾಧ್ಯವಾಗುತ್ತಿಲ್ಲ.

'ಅಪ್ಪು' ಅಭಿಮಾನಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಕಲಾವಿದ ಗಣೇಶ್ ಆಚಾರ್ಯ ಗುಂಪಲಾಜೆ ಅವರು ವಿಶೇಷ ರೀತಿಯಲ್ಲಿ ಅಪ್ಪುವಿಗೆ ನಮನ ಸಲ್ಲಿಸಿದ್ದಾರೆ.

ಸುಮಾರು ಏಳು ಗಂಟೆಗಳ ವರೆಗೆ ಶ್ರಮ ವಹಿಸಿ ರಂಗೋಲಿಯಲ್ಲಿ ಅಪ್ಪುವಿನ ನಗುಮೊಗದ ಚಿತ್ರ ಬಿಡಿಸಿದ್ದಾರೆ. ಈ ಮೂಲಕ ಬಹುಜನ ಪ್ರೀತಿ ಗಳಿಸಿರುವ ಅಪ್ಪುವಿಗೆ ಭಾವಪೂರ್ಣ ನಮನ ಸಲ್ಲಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

06/11/2021 11:12 am

Cinque Terre

5.29 K

Cinque Terre

0

ಸಂಬಂಧಿತ ಸುದ್ದಿ