ಉಡುಪಿ: ಪುನೀತ್ ರಾಜ್ ಗೆ ಪುನೀತ್ ರಾಜ್ ಅವರೇ ಸಾಟಿ ,ಅವರ ನಿಧನದ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನಾಡಿನ ಜನತೆಗೆ ನೀಡಲಿ ಎಂದು ಅಪ್ಪು ನಿಧನಕ್ಕೆ ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್ ಸಂತಾಪ ಸೂಚಿಸಿದ್ದಾರೆ.ಅಪ್ಪು ಸರಳ ವ್ಯಕ್ತಿತ್ವ ಮತ್ತು ಸಮಾಜಸೇವೆ ಮೂಲಕವೂ ಜನರ ಮನಸಿನಲ್ಲಿ ಉಳಿದಿದ್ದಾರೆ.ಅವರ ಅಗಲುವಿಕೆ ಈ ನಾಡಿಗೆ ಬಹು ದೊಡ್ಡ ನಷ್ಟ. ಅಗಲುವ ವಯಸ್ಸೇನಲ್ಲ ಅವರದ್ದು.ಕಟ್ಟುಮಸ್ತಾಗಿ ,ಲವಲವಿಕೆಯಿಂದ ಇದ್ದು ಜನಸಾಮಾನ್ಯರೊಂದಿಗೆ ಅವರು ಬೆರೆಯುತ್ತಿದ್ದ ನೆನಪು ಸದಾ ಕಾಲ ಜನರ ಮನದಲ್ಲಿ ಉಳಿಯಲಿದೆ.ಅವರ ಆತ್ಮಕ್ಕ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.
Kshetra Samachara
30/10/2021 07:03 pm