ಮಂಗಳೂರು: ಚಂದನವನದ ಬೆಡಗಿ ಶುಭಾ ಪೂಂಜಾ ತಮ್ಮ ಭಾವಿ ಪತಿಯೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದರು. ಗೆಳೆಯ, ಭಾವಿ ಪತಿ ಸುಮಂತ್ ಬಿಲ್ಲವರೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಮುಂಭಾಗ ನಿಂತು ತೆಗೆಸಿಕೊಂಡ ಫೋಟೋವನ್ನು ಶುಭಾ ಪೂಂಜಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ, 'ಧರ್ಮಸ್ಥಳ ದರ್ಶನ' ಎಂದು ಬರೆದು ಕೊಂಡಿದ್ದಾರೆ.
ಬಿಗ್ಬಾಸ್ ನಿಂದ ಹೊರ ಬಂದ ಬಳಿಕ ಶುಭಾ ಪೂಂಜಾ ಹಾಗೂ ಸುಮಂತ್ ಗೋವಾಕ್ಕೆ ಹಾರಿದರು. ಇದೀಗ ಪವಿತ್ರ ಧಾರ್ಮಿಕ ಕ್ಷೇತ್ರಗಳಿಗೆ ತನ್ನ ಭಾವಿ ಪತಿ ಜತೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಶುಭಾ ಶೇರ್ ಮಾಡಿರುವ ಈ ಫೋಟೋಗೆ ಅಭಿಮಾನಿಗಳಿಂದ ಉತ್ತಮ ಕಮೆಂಟ್ ಬರುತ್ತಿದೆ.
Kshetra Samachara
04/09/2021 02:37 pm