ಉಡುಪಿ: ಕೋವಿಡ್ ನಿಯಮಾವಳಿ ಪ್ರಕಾರ ಕಳೆದ ಹನ್ನೊಂದು ತಿಂಗಳಿನಿಂದ ಥಿಯೇಟರ್ ಗಳು ಪೂರ್ಣ ಪ್ರಮಾಣದಲ್ಲಿ ಓಪನ್ ಆಗಿರಲಿಲ್ಲ. ಈಗ ರಾಜ್ಯ ಸರಕಾರ ಥಿಯೇಟರ್ ಗಳಿಗೆ ಪೂರ್ಣಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅನುಮತಿ ನೀಡಿದೆ.
ಹೌಸ್ ಫುಲ್ ಚಿತ್ರಪ್ರದರ್ಶನಕ್ಕೆ ರಾಜ್ಯ ಸರಕಾರ ಅನುಮತಿ ಕೊಟ್ಟ ಹಿನ್ನೆಲೆಯಲ್ಲಿ ಕೃಷ್ಣನಗರಿ ಉಡುಪಿಯಲ್ಲಿ ಬಹುತೇಕ ಚಿತ್ರಮಂದಿರಗಳು ಓಪನ್ ಆಗಿವೆ. ತಿಂಗಳುಗಳ ಬಳಿಕ ಸಿನಿಮಾ ಥಿಯೇಟರ್ ಗಳು ತೆರೆದುಕೊಂಡರೂ
ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಕಲ್ಪನಾ ಚಿತ್ರಮಂದಿರದಲ್ಲಿ ಇನ್ಸ್‌ಪೆಕ್ಟರ್ ವಿಕ್ರಂ ಸಿನಿಮಾ ಇದೆ. ಆದರೆ, ನೋಡುವುದಕ್ಕೆ ಕೇವಲ ನಲ್ವತ್ತು ಜನ ಮಾತ್ರ ಬಂದಿದ್ದಾರೆ. ಶುಚಿತ್ವ, ಕೋವಿಡ್ ನಿಯಮ ಪಾಲಿಸಬೇಕು ಎಂಬ ನಿಯಮ ಈಗಲೂ ಮುಂದುವರಿದಿದೆ.
ಇನ್ನು ನಗರದ ಅಲಂಕಾರ್ ಚಿತ್ರ ಮಂದಿರದಲ್ಲಿ ಶ್ಯಾಡೋ ಸಿನಿಮಾ ಇದೆ. ಚಿತ್ರಕ್ಕೆ ಸ್ಟೇ ಬಂದಿರುವುದರಿಂದ ಮಾರ್ನಿಂಗ್ ಶೋ ರದ್ದಾಗಿದೆ. ಹೀಗಾಗಿ ಪ್ರೇಕ್ಷಕರಿಗೆ ನಿರಾಶೆಯಾಗಿದೆ. ಸುದೀಪ್ , ದರ್ಶನ್ , ಯಶ್, ಶಿವರಾಜ್ ಕುಮಾರ್, ಪುನೀತ್, ಧ್ರುವ ಸರ್ಜಾ ಅವರ ಚಿತ್ರಗಳು ಬಂದರೆ ಥಿಯೇಟರ್ ನತ್ತ ಜನ ಬರುತ್ತಾರೆ ಎನ್ನುವುದು ಚಿತ್ರಮಂದಿರದ ಮಾಲೀಕರ ಅಭಿಪ್ರಾಯ.
Kshetra Samachara
05/02/2021 05:08 pm