ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಂದಾವರ: "ತುಳು ಚಿತ್ರರಂಗಕ್ಕೆ ಗುಣಮಟ್ಟದ ಸ್ಕ್ರಿಪ್ಟ್, ಹೊಸತನ ಅಗತ್ಯ"

ಬಂಟ್ವಾಳ: ಕಳೆದ 9 ತಿಂಗಳ ಬಳಿಕ ಮಂಕಾಗಿದ್ದ ಕಲಾವಿದರ ಬದುಕಿನಲ್ಲಿ ನಿಧಾನವಾಗಿ ಹೊಸ ಬೆಳಕು ಮೂಡುತ್ತಿರುವ ಈ ಕಾಲಘಟ್ಟದಲ್ಲಿ ಉತ್ತಮ ಗುಣಮಟ್ಟದ ಹೆಚ್ಚು ತುಳು ಚಿತ್ರಗಳು ತಯಾರಾಗಬೇಕಾಗಿದ್ದು, ಈ ದೆಸೆಯಲ್ಲಿ ವಿದ್ಯಾವಂತ ಯುವ ಲೇಖಕರ, ನಿರ್ದೇಶಕರ ಅಗತ್ಯವಿದೆ ಎಂದು ತುಳು ರಂಗಭೂಮಿ, ಸಿನಿ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಹೇಳಿದರು.

ಪುಂಜಾಲಕಟ್ಟೆಯ ಮಂತ್ರದೇವತೆ ಕ್ರಿಯೇಷನ್ಸ್ ಅವರ 'ಚಂದ್ರನ್' ಕಿರುಚಿತ್ರದ ಪ್ರಥಮ ಪೋಸ್ಟರ್ ನ್ನು ಶನಿವಾರ ನಂದಾವರ ಶ್ರೀ ಶಂಕರನಾರಾಯಣ ವಿನಾಯಕ ದುರ್ಗಾಂಬ ಕ್ಷೇತ್ರದಲ್ಲಿ ಅನಾವರಣಗೊಳಿಸಿ ಮಾತನಾಡಿದರು. ಇಂದು ಹೊಸ ಸಿನಿಮಾಗಳು, ಕಿರುಚಿತ್ರಗಳು ನಿರ್ಮಾಣವಾಗುತ್ತಿವೆ. ಆದರೆ, ಒಂದೇ ರೀತಿಯ ಕತೆಗಳು ಕಂಡುಬರುತ್ತಿವೆ ಎಂದವರು ವಿಷಾದಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಮಾತನಾಡಿ, ಯುವಜನತೆ ಮಾಡುವಂತಹ ಸಮಾಜಮುಖಿ, ಸಂಸ್ಕೃತಿ ಉಳಿಸುವ ಕಾರ್ಯಕ್ಕೆ ಹಿರಿಯರು,ನಾಗರಿಕರು ಪ್ರೋತ್ಸಾಹ ನೀಡಬೇಕು ಎಂದರು. ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಸಂಚಾಲಕ ಮೋಹನದಾಸ್ ಕೊಟ್ಟಾರಿ, ಹಿರಿಯ ಕಲಾವಿದರಾದ ಡಿ.ಎಸ್.ಬೋಳಾರ್, ಸ್ವರಾಜ್ ಶೆಟ್ಟಿ, ರಾಜೇಶ್ ಕಣ್ಣೂರು, ಚಿದಾನಂದ ಅದ್ಯಪಾಡಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಉದ್ಯಮಿ ಹರೀಂದ್ರ ಪೈ ಶುಭ ಹಾರೈಸಿದರು.

Edited By : Nagesh Gaonkar
Kshetra Samachara

Kshetra Samachara

02/01/2021 06:11 pm

Cinque Terre

13.46 K

Cinque Terre

1

ಸಂಬಂಧಿತ ಸುದ್ದಿ