ಉಡುಪಿ: ಉಡುಪಿಯಲ್ಲಿ ನಡೆದ ದುರ್ಗಾದೌಡ್ ಸಮಾವೇಶದಲ್ಲಿ ಗುಜರಾತನ ಸಾಮಾಜಿಕ ಕಾರ್ಯಕರ್ತೆ ಕಾಜಲ್ ಹಿಂದುಸ್ತಾನಿ
ದಿಕ್ಸೂಚಿ ಭಾಷಣ ಮಾಡಿದ್ದು, ಲವ್ ಜಿಹಾದ್ ವಿಷ ಬೀಜ ಬಿತ್ತುವುದೇ ಬಾಲಿವುಡ್ ಸಿನಿಮಾಗಳ ಉದ್ದೇಶ. ಉತ್ತರ ಭಾರತೀಯರು ಬಾಲಿವುಡ್ ಸಿನಿಮಾಗಳನ್ನು ಬಹಿಷ್ಕರಿಸುತ್ತಿದ್ದಾರೆ. ಆದರೆ ನಿಮಗೆ ದಕ್ಷಿಣ ಭಾರತೀಯರಿಗೆ ಏನಾಗಿದೆ? ನೀವೂ ಬಾಲಿವುಡ್ ಸಿನೆಮಾಗಳನ್ನು ಬಹಿಷ್ಕರಿಸಿ ಎಂದು ಕರೆ ನೀಡಿದ್ದಾರೆ.
ಕೃಷ್ಣಮಠದ ರಾಜಾಂಗಣದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಬಾಲಿವುಡ್ ಸಿನಿಮಾ ಮತ್ತು ಧಾರವಾಹಿಗಳ ಮೂಲಕ ಹಿಂದೂ ಮಹಿಳೆಯರಿಗೆ ಅವಮಾನ ಮಾಡಲಾಗುತ್ತಿದೆ. ಪ್ರೀತಿ, ಅಕ್ರಮ ಮದುವೆ ಮಾಡಿಕೊಳ್ಳುವವರೆಂದು ಹಿಂದೂ ಮಹಿಳೆಯರನ್ನು ಬಿಂಬಿಸಲಾಗುತ್ತಿದೆ. ಆದರೆ ನಿಜ ಜೀವನದಲ್ಲಿ ಹಿಂದೂ ಮಹಿಳೆಯರು ಎಂದೂ ಹೀಗೆ ಮಾಡುವುದಿಲ್ಲ.ಬಾಲಿವುಡ್ ನ ಕೊಳಕು ಸಿನಿಮಾ ಗಳನ್ನು ದಕ್ಷಿಣ ಭಾರತೀಯರು ನೋಡಲೇಬೇಡಿ.
ದಕ್ಷಿಣ ಭಾರತೀಯರು ಕರಣ್ ಜೋಹರ್ ನನ್ನು ಬಹಿಷ್ಕಾರ ಮಾಡಿ. ಇಸ್ಲಾಮಿಕ್ ಆಕ್ರಮಣ ಹೆಚ್ಚುತ್ತಿದ್ದರೆ ಹಿಂದೂ ಜಾಗೃತನಾದರೂ ಮಲಗಿದ ಸ್ಥಿತಿಯಲ್ಲೇ ಇದ್ದಾನೆ. ಲವ್ ಜಿಹಾದ್ ಮತ್ತು ನಮ್ಮ ಧಾರ್ಮಿಕ ಕೇಂದ್ರಗಳನ್ನು ವಶ ಪಡಿಸಿಕೊಳ್ಳುವುದು ಮುಸಲ್ಮಾನರ ಕಾರ್ಯತಂತ್ರವಾಗಿದೆ.
ಪಿಎಫ್ ಐ ಅಂದರೆ ಪಾಯಿಸನ್ ಫಾರ್ ಇಂಡಿಯಾ ಎಂದು ಹೇಳಿದ್ದಾರೆ.
PublicNext
03/10/2022 12:09 pm