ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮಠಾಧೀಶರುಗಳು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಿದರು. ನಗರದ ಸಿಟಿ ಸೆಂಟರ್ ಮಾಲ್‌ನ ಸಿನಿ ಪೊಲೀಸ್ ಚಿತ್ರ ಮಂದಿರಲ್ಲಿ ಮಠಾಧೀಶರುಗಳು 'ದಿ ಕಾಶ್ಮೀರ್ ಫೈಲ್ಸ್' ವೀಕ್ಷಿಸಿದರು.
ವಿಎಚ್‌ಪಿ ಮಠಾಧೀಶರುಗಳಿಗೆ ಸಿನಿಮಾ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿತ್ತು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಕಾವೂರು ಆದಿಚುಂಚನಗಿರಿ ಶಾಖಾ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಕದ್ರಿ ಯೋಗೀಶ್ವರ (ಜೋಗಿ) ಮಠದ ಶ್ರೀ ನಿರ್ಮಲನಾಥ್‌ಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಮೂಡುಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಕೇಮಾರು ಮಠದ ಶ್ರೀ ಈಶವಿಠಲದಾಸ ಸ್ವಾಮೀಜಿ, ಕರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ, ಒಡಿಯೂರಿನ ಸಾಧ್ವಿ ಮಾತಾನಂದಮಯಿ, ಚಿಲಿಂಬಿ ಮಠದ ವಿದ್ಯಾನಂದ ಸರಸ್ವತಿ, ಸ್ವಾಮೀಜಿಗಳು ಸಿನಿಮಾ ವೀಕ್ಷಣೆ ಮಾಡಿದರು. ಮಠಾಧೀಶರುಗಳೊಂದಿಗೆ ಅವರ ಶಿಷ್ಯ ವರ್ಗವೂ ಸೇರಿದಂತೆ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರೂ ಸಿನಿಮಾ ವೀಕ್ಷಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಠಾಧೀಶರುಗಳು ಮಾತನಾಡಿ, 'ದಿ ಕಾಶ್ಮೀರ ಫೈಲ್ಸ್' ಸಿನಿಮಾ ವೀಕ್ಷಿಸಿದ ಬಳಿಕ ರಕ್ತ ಕುದಿಯುವಂತಾಯಿತು. ದೇಶದ ಹಿಂದಿನ ಸರಕಾರವು ಸಮಾಜವನ್ನು ಯಾವ ರೀತಿಯಲ್ಲಿ ನೋಡಿತು. ಭಯೋತ್ಪಾದನೆಯ ಕರಿನೆರಳಿನ ಛಾಯೆ ಭಾರತದ ಮೇಲೆ ಹೇಗೆ ಬಿತ್ತು. ಪಾಕಿಸ್ತಾನ ಕುಮ್ಮಕ್ಕು ನೀಡಿ ಹೇಗೆ ಭಯೋತ್ಪಾದನೆಯನ್ನು ಬೆಳೆಸಿತು ಎಂಬುದನ್ನು ಈ ಸಿನಿಮಾ ಮೂಲಕ ಅರ್ಥಮಾಡಿಕೊಳ್ಳಬಹುದು. ಸಿನಿಮಾ ನೋಡುವ ಸಂದರ್ಭ ಕಣ್ಣಲ್ಲಿ ನೀರು ಬರುತ್ತದೆ. ನೈಜ ಘಟನೆ ಆಧಾರಿತ ಸಿನಿಮಾ ನಿರ್ಮಿಸಿರುವ ನಿರ್ದೇಶಕರಿಗೆ ಹ್ಯಾಟ್ಸಪ್ ಹೇಳಬೇಕು ಎಂದರು.
PublicNext
29/03/2022 04:28 pm