ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ : ಬಪ್ಪನಾಡು ದೇವಸ್ಥಾನಕ್ಕೆ ಚಿತ್ರನಟ ಧ್ರುವ ಸರ್ಜಾ ಭೇಟಿ

ಇತಿಹಾಸ ಪ್ರಸಿದ್ಧ ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಚಲನಚಿತ್ರ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಭೇಟಿ ನೀಡಿದ್ದಾರೆ.

ಈ ಸಂದರ್ಭ ದೇವಸ್ಥಾನದ ಅರ್ಚಕ ಶ್ರೀಪತಿ ಉಪಾಧ್ಯಾಯ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದರು. ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು ದೇವಸ್ಥಾನದ ವತಿಯಿಂದ ನಟನನ್ನು ಗೌರವಿಸಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಅಕೌಂಟೆಂಟ್ ಶಿವಶಂಕರ್, ಕಾರ್ತಿಕ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಚಲನಚಿತ್ರ ನಟ ದೇವಸ್ಥಾನಕ್ಕೆ ಆಗಮಿಸುವ ವಿಷಯ ತಿಳಿದು ಅಭಿಮಾನಿಗಳು ಚಿತ್ರನಟನ ಜೊತೆ ಸೆಲ್ಫಿಗಾಗಿ ಮುಗಿಬಿದ್ದರು ಅಭಿಮಾನಿಗಳ ಜೊತೆ, ಆಟೋ ಚಾಲಕರ ಜೊತೆ ಸೆಲ್ಫಿ ತೆಗೆದು ನಟ ಧ್ರುವ ಸರ್ಜಾ ಖುಷಿ ಪಡಿಸಿದರು.

Edited By :
Kshetra Samachara

Kshetra Samachara

03/09/2022 05:30 pm

Cinque Terre

7.98 K

Cinque Terre

0